ಕೆನಡಾ: ಇತ್ತಿಚ್ಚಿನ ದಿನಮಾನಗಳಲ್ಲಿ ಕೊಲೆ, ಸುಲಿಗೆ ಎಂಬುದು ಎಲ್ಲಾ ದೇಶಗಳಲ್ಲಿಯೂ ಸಾಮಾನ್ಯವಾಗಿದೆ.
ಆದ್ರೆ ಇಂತಹ ಕೃತ್ಯ ಎಸಗುವ ಕ್ರಿಮಿನಲ್ ಗಳು ಮಾಡುವ ಪ್ಲಾನ್ ಮಾತ್ರ ದಂಗಾಗಿಸುವಂತಿರುತ್ತವೆ.
ಸದ್ಯ ರಾಜರ ಕಾಲದ ವೇಷಭೂಷಣ ಧರಿಸಿ ಕತ್ತಿ ಹಿಡಿದ ವ್ಯಕ್ತಿಯೊಬ್ಬ ಜನರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಕೆನಡಾದ ಕ್ಯೂಬೆಕ್ ನಗರದಲ್ಲಿ ನಿನ್ನೆ ವರದಿಯಾಗಿದೆ.
ಈ ಘಟನೆಯಲ್ಲಿ ಇಬ್ಬರು ವ್ಯಕ್ತಿಗಳು ಹತ್ಯೆಯಾಗಿದ್ದು, ಹಲವರಿಗೆ ಗಾಯಗಳಾಗಿವೆ.
24 ವರ್ಷದ ಶಂಕಿತ ಹಲ್ಲೆಕೋರನನ್ನು ಪೊಲೀಸರು ಬಂಧಿಸಿದ್ದಾರೆ.
“24 ವರ್ಷದ ವ್ಯಕ್ತಿಯೊಬ್ಬ ಶನಿವಾರ ರಾತ್ರಿ ಭಯಾನಕ ವಾತಾವರಣ ಸೃಷ್ಟಿಸಿಸಿದ. ಈತ ಕ್ಯೂಬೆಕ್ ನಗರದವನಲ್ಲ.
ಆದರೆ, ಹೆಚ್ಚೆಚ್ಚು ಜನರನ್ನು ಕೊಲ್ಲುವ ಉದ್ದೇಶದಿಂದ ಇಲ್ಲಿಗೆ ಬಂದಿದಂತಿತ್ತು” ಎಂದು ಕ್ಯೂಬೆಕ್ ಸಿಟಿ ಪೊಲೀಸ್ ಮುಖ್ಯಸ್ಥ ರಾಬರ್ಟ್ ಪಿಜನ್ ತಿಳಿಸಿದ್ಧಾರೆ.
ಇನ್ನೂ ಇದು ಭಯೋತ್ಪಾದಕ ದಾಳಿ ಅಲ್ಲ ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ದಾಳಿ ಮಾಡಿದ ವ್ಯಕ್ತಿ ಜಪಾನೀ ಖಡ್ಗವನ್ನ ಹಿಡಿದಿದ್ದು. ಈತ ಜನರನ್ನು ಆರಿಸಿ ಮಾರಕಾಸ್ತ್ರದಿಂದ ದಾಳಿ ನಡೆಸುತ್ತಿದ್ದನೆನ್ನಲಾಗಿದೆ.
PublicNext
02/11/2020 08:06 am