ಮೈಸೂರು : ಒಡಹುಟ್ಟಿದವನ ಸಾವಿನ ಸುದ್ದಿ ಅರಗಿಸಿಕೊಳ್ಳಲಾಗದೆ ತಾನು ಸಾವಿಗೆ ಶರಣಾದ ಘಟನೆವೊಂದು ಮೈಸೂರು ಜಿಲ್ಲೆಯ ಹೆಚ್. ಡಿ. ಕೋಟೆಯಲ್ಲಿ ನಡೆದಿದೆ. ಹೌದು ಪ್ರೀತಿಯ ತಮ್ಮ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿದು ಅಣ್ಣನೂ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ.
ಎಲೆಗುಂಡಿ ಗ್ರಾಮದ ಸಹೋದರರಾದ ವೆಂಕಟೇಶ್ (28), ಹರೀಶ್ (25) ಪ್ರತ್ಯೇಕ ಸ್ಥಳಗಳಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಬಳಿಕ ಗ್ರಾಮದಲ್ಲಿ ಮೌನ ಆವರಿಸಿದೆ.
ಟ್ಯಾಕ್ಟರ್ ಅನ್ನು ರಸ್ತೆಯಲ್ಲಿ ಸರಿಯಾಗಿ ಓಡಿಸಿಕೊಂಡು ಬರುವಂತೆ ಹರೀಶ್ ಗೆ ತಂದೆ ಬುದ್ಧಿವಾದ ಹೇಳಿದ್ದಾರೆ. ತಂದೆಯ ಮಾತುಗಳಿಂದ ಮನನೊಂದ ಹರೀಶ್ ಗುರುವಾರ ಬೆಳಗ್ಗೆ ಎಲೆಹುಂಡಿ ಸಮೀಪದ ಕೆರೆ ಬಳಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ವಿಚಾರವನ್ನು ಮೈಸೂರಿಗೆ ಹೋಗಿದ್ದ ವೆಂಕಟೇಶ್ ಗೆ ಸ್ನೇಹಿತರು ತಿಳಿಸಿದ್ದಾರೆ. ಅಣ್ಣ-ತಮ್ಮಂದಿರ ನಡುವೆ ಹೊಂದಾಣಿಕೆ ಮತ್ತು ಪ್ರೀತಿ ಹೆಚ್ಚಾಗಿದ್ದರಿಂದ ವೆಂಕಟೇಶ್, ಮನೆಗೆ ಬರದೆ ತನ್ನ ಕಾರಿನಲ್ಲಿ ಸರಗೂರು ಕಡೆಗೆ ಹೋಗಿ ನಾಲೆಯ ಸಮೀಪ ಮರವೊಂದಕ್ಕೆ ನೇಣು ಹಾಕಿಕೊಂಡಿದ್ದಾರೆ.
ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.
PublicNext
26/02/2021 09:52 am