ಭೋಪಾಲ್: ಮದುವೆಗೂ ಮುನ್ನ ಮಗಳು ಮಗುವಿಗೆ ಜನ್ಮ ನೀಡಿದ್ದರಿಂದ ಎರಡು ದಿನದ ಕಂದಮ್ಮನನ್ನು ಅಜ್ಜ-ಅಜ್ಜಿ ಕ್ರೂರವಾಗಿ ಕೊಲೆಗೈದ ಘಟನೆ ಕಳೆದ ತಿಂಗಳು ನಡೆದಿದ್ದು, ಆರೋಪಿಗಳ ಕೃತ್ಯ ಸದ್ಯ ಬೆಳಕಿಗೆ ಬಂದಿದೆ.
ಭೋಪಾಲ್‌ನ ಅಯೋಧ್ಯ ನಗರದಲ್ಲಿ ಸೆಪ್ಟೆಂಬರ್ 30ರಂದು ಅಪರಿಚಿತ ಮಗುವಿನ ಶವ ಪತ್ತೆಯಾಗಿತ್ತು. ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಈ ವೇಳೆ ಶಾಲಿನಿಂದ ಸುತ್ತಿದ್ದ ಮಗುವಿನ ಮೃತದೇಹವನ್ನು ತೆರೆದು ನೋಡಿದಾಗ ಅದರ ಎದೆ ಹಾಗೂ ಬೆನ್ನಿನ ಭಾಗದಲ್ಲಿ ಸುಮಾರು 100ಕ್ಕೂ ಹೆಚ್ಚು ಬಾರಿ ಇರಿತವಾಗಿರುವ ಗುರುತುಗಳು ಇರುವುದನ್ನು ಪೊಲೀಸರು ಗಮನಿಸಿದ್ದರು. ಹೀಗಾಗಿ ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು.
ಮರಣೋತ್ತರ ಪರೀಕ್ಷೆಯಲ್ಲಿ ಸಣ್ಣದಾದ ಹರಿತವಾದ ವಸ್ತುವಿನಿಂದ ಚುಚ್ಚಿ ಕೊಲೆ ಮಾಡಲಾಗಿದೆ ಎಂಬುದಾಗಿ ವರದಿ ಬಂದಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದ ಪೊಲೀಸರು ಅಜ್ಜ-ಅಜ್ಜಿಯನ್ನ ಬಂಧಿಸಿದ್ದಾರೆ. ಪೊಲೀಸರು ಮೊದಲಿಗೆ ಆಸ್ಪತ್ರೆಗಳಲ್ಲಿ ಹೆಣ್ಣು ಮಗು ಹುಟ್ಟಿರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ತದನಂತರ ಮನೆಯಲ್ಲಿಯೇ ಹೆರಿಗೆ ಮಾಡಿಸುವ ಮಹಿಳೆಯನ್ನ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರ ಮುಂದೆ ದಂಪತಿ ಮಗುವನ್ನು ತಾವೇ ಕೊಲೆ ಮಾಡಿರೋದಾಗಿ ತಪ್ಪೊಪ್ಪಿಕೊಂಡಿದ್ದಾರೆ.
PublicNext
04/10/2020 04:49 pm