ಪಾಟ್ನಾ: ಪಾಸ್‌ಪೋರ್ಟ್ ಪಡೆಯಲು ಸಂಬಂಧಿಸಿದ ಕಚೇರಿಗೆ ಹೋಗಿದ್ದ ಯುವತಿಯೊಂದಿಗೆ ಅಲ್ಲಿನ ಅಧಿಕಾರಿ ದುರ್ವರ್ತನೆ ತೋರಿದ ಆರೋಪ ಕೇಳಿ ಬಂದಿದೆ. ಸುಮಾರು ದಿನಗಳ ಹಿಂದೆ ನಡೆದ ಈ ಘಟನೆಯ ಬಗ್ಗೆ ಯುವತಿ ಹಾಗೂ ಆಕೆಯ ಗೆಳತಿಯರು ಮಾತನಾಡಿದ ವಿಡಿಯೋ ಈಗ ವೈರಲ್ ಆಗುತ್ತಿದೆ.
ಬಿಹಾರದ ಪಾಟ್ನಾದಲ್ಲಿ ಈ ಘಟನೆ ನಡೆದಿದೆ. ಯುವತಿಯೊಬ್ಬಳು ಪಾಸ್‌ಪೋರ್ಟ್ ಪಡೆಯಲು ಅರ್ಜಿ ಸಲ್ಲಿಸಿದ್ದಾಳೆ. ಇದಕ್ಕೆ ಸಂಬಂಧಿಸಿದ ದಾಖಲಾತಿಗಳ ಪರಿಶೀಲನೆಗಗಾಗಿ ಪಾಸ್‌ಪೋರ್ಟ್ ಕಚೇರಿಗೆ ಹೋದಾಗ ಅಲ್ಲಿನ ಅಧಿಕಾರಿಯೊಬ್ಬ ಯುವತಿಯನ್ನು ಕೆಟ್ಟ ದೃಷ್ಟಿಯಿಂದ ನೋಡಿದ್ದಾನೆ ಎನ್ನಲಾಗಿದೆ. ಜತೆಗೆ ದಾಖಲೆಗಳಲ್ಲಿ ಕೆಲವು ಮಾಹಿತಿ ಅಸ್ಪಷ್ಟವಾಗಿದ್ದ ಕಾರಣ ಆ ಅಧಿಕಾರಿ ನಿನಗೆ ಇಬ್ಬರು ಅಪ್ಪಂದಿರು ಇದ್ದಾರಾ? ಎಂದು ಕುಹಕವಾಡಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ.
PublicNext
07/08/2022 10:14 pm