ಬೆಂಗಳೂರು: ಬಿಡಿಎ ಮಧ್ಯವರ್ತಿಗಳ ಮನೆ ಮೇಲೆ ಇಂದು ಬೆಳ್ಳಂಬೆಳಿಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎಸಿಬಿ ಎಸ್‌ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಬರೋಬ್ಬರಿ 100 ಅಧಿಕಾರಿಗಳು ಇಂದು ಫೀಲ್ಡ್‌ಗೆ ಇಳಿದಿದ್ದಾರೆ.
ಅಕ್ರಮ ಎಸಗುತ್ತಿದ್ದ ಮಾಹಿತಿ ಮೇರೆಗೆ ಮಧ್ಯವರ್ತಿಗಳು ಹಾಗೂ ಏಜೆಂಟ್‌ಗಳ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ದಾಖಲೆ ಪತ್ರಗಳ ಪರಿಶೀಲನೆ ನಡೆಸಿದ್ದಾರೆ. ವೈಯಕ್ತಿಕ ಪ್ರಭಾವದ ಮೂಲಕ ಅವ್ಯವಹಾರ ಎಸಗಿದ ಹಿನ್ನೆಲೆ 9 ಮಧ್ಯವರ್ತಿಗಳ ಮನೆ ಹಾಗೂ ಕಚೇರಿ ಮೇಲೆ ಏಕಕಾಲದಲ್ಲಿ ದಾಳಿ ಮಾಡಿದ್ದಾರೆ.
ರಘು ಬಿ ಎನ್, ಚಾಮರಾಜಪೇಟೆ
ಮೋಹನ್, ಮನೋರಾಯನ ಪಾಳ್ಯ, ಆರ್ ಟಿ ನಗರ
ಮನೋಜ್, ದೊಮ್ಮಲೂರು
ಮುನಿರತ್ನ@ರತ್ನವೇಲು, ಕೆಂಗುಟೆ, ಮಲ್ಲತ್ ಹಳ್ಳಿ
ತೇಜು@ತೇಜಸ್ವಿ, ಆರ್ ಆರ್ ನಗರ
ಅಶ್ವಥ್ @ಮುದ್ದಿನಪಾಳ್ಯ ಅಶ್ವಥ್, ಕೆಜಿ ಸರ್ಕಲ್ , ಮುದ್ದಿನಪಾಳ್ಯ
ರಾಮ, ಚಾಮುಂಡೇಶ್ವರಿನಗರ, ಬಿಡಿಎ ಲೇಔಟ್
ಚಿಕ್ಕ ಹನುಮಯ್ಯ, ಮುದ್ದಿನಪಾಳ್ಯ
ಈ ಎಲ್ಲರ ನಿವಾಸಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಸತತ ಪರಿಶೀಲನೆ ನಡೆಸುತ್ತಿದ್ದಾರೆ.
PublicNext
22/03/2022 09:25 am