ಕೊಲಂಬೊ/ನವದೆಹಲಿ: ಶ್ರೀಲಂಕಾ ಜಲಗಡಿ ಪ್ರವೇಶಿಸಿದರೆಂಬ ಕಾರಣಕ್ಕೆ ಶ್ರೀಲಂಕಾ ಕೋಸ್ಟಲ್ ಸಿಬ್ಬಂದಿಯಿಂದ 11 ಭಾರತೀಯ ಮೀನುಗಾರರು ಬಂಧನಕ್ಕೊಳಗಾಗಿದ್ದರು. ಸದ್ಯ ಈ ಮೀನುಗಾರರನ್ನು ಜಾಫ್ನಾ ನ್ಯಾಯಾಲಯ ಬಿಡುಗಡೆ ಮಾಡಿದೆ ಎಂದು ಭಾರತೀಯ ಹೈಕಮಿಷನ್ ಮಂಗಳವಾರ ತಿಳಿಸಿದೆ.
ಜಾಫ್ನಾದಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಅವರು ನ್ಯಾಯಾಲಯದಲ್ಲಿ ತಮ್ಮ ವಾದವನ್ನು ಮಂಡಿಸುವ ಮೂಲಕ ಕಾನೂನಿನ ಸಹಾಯ ಒದಗಿಸಿದ್ದಾರೆ ಎಂದು ಹೈಕಮಿಷನ್ ಹೇಳಿದೆ. ಶ್ರೀಲಂಕಾದ ಕಡಲ ಪ್ರದೇಶದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಶ್ರೀಲಂಕಾ ನೌಕಾಪಡೆ ಭಾರತೀಯ ಮೀನುಗಾರರನ್ನು ಬಂಧಿಸಿತ್ತು. ಜನವರಿಯಲ್ಲಿ, ಶ್ರೀಲಂಕಾ ನ್ಯಾಯಾಲಯವು ದ್ವೀಪ ರಾಷ್ಟ್ರದ ಪ್ರಾದೇಶಿಕ ನೀರಿನಲ್ಲಿ ಮೀನುಗಾರಿಕೆ ನಡೆಸುತ್ತಿರುವ ಆರೋಪದ ಮೇಲೆ ಬಂಧಿತರಾಗಿದ್ದ 56 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡುವಂತೆ ಆದೇಶಿಸಿತು.
PublicNext
08/03/2022 04:47 pm