ಗದಗ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಪೌಷ್ಟಿಕಾಂಶವುಳ್ಳ ಆಹಾರವನ್ನು ಒದಗಿಸುತ್ತಿದೆ. ಆದರೆ ಲಕ್ಷ್ಮೇಶ್ವರ ಪಟ್ಟಣದ ಅಂಗನವಾಡಿ ಕೇಂದ್ರ ಕೋಡ್ 204 ರಲ್ಲಿ ಸರಿಯಾದ ರೀತಿಯಲ್ಲಿ ಆಹಾರ ನೀಡುತ್ತಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಮಹಿಳಾ ಘಟಕದ ಆಧ್ಯಕ್ಷೆ ಶಶಿಕಲಾ ಬಡಿಗೇರ ಆರೋಪಿಸಿದ್ದಾರೆ.
ಪಟ್ಟಣದಲ್ಲಿ ಇರುವ ಕೆಲವೊಂದು ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿಯರಿಗೆ ಕೊಡುವ ಮೊಟ್ಟೆಯನ್ನು ಕಡಿಮೆ ನೀಡುತ್ತಿದ್ದಾರೆ ಹಾಗೂ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದ್ದರೂ ಹೆಚ್ಚಿಗೆ ಹಾಕಿ ಅವರ ಆಹಾರವನ್ನು ಅವರು ತೆಗೆದುಕೊಂಡು ಹೋಗಿ ದೊಡ್ಡ ದೊಡ್ಡ ಅಂಗಡಿಗಳಲ್ಲಿ ಮಾರಾಟ ಮಾಡುತ್ತಾರೆ ಇನ್ನೂ ಗರ್ಭಿಣಿ ಮಹಿಳೆಯರಿಗೆ ಹಾಲಿನ ಪಾಕೆಟ್ ಕೊಡುವ ಬದಲು ಅದನ್ನು ಹರಿದು ಹಾಕಿ ಒಂದು ಲೋಟದಿಂದ ಅವರಿಗೆ ನೀಡುತ್ತಿದ್ದಾರೆ ಇನ್ನೂ ಗರ್ಭಿಣಿ ಮಹಿಳೆಯರಿಗೆ ಬೆಲ್ಲ ಅಕ್ಕಿ ನೀಡುವಾಗ ತೂಕ ಮಾಡಿ ಹಾಕುವುದಿಲ್ಲ ಅದನ್ನು ಕೂಡ ಒಂದು ಲೋಟದ ಮುಖಾಂತರ ನೀಡುತ್ತಾರೆ ಇದರ ಎಲ್ಲದರೂ ಕಡಿತ ಮಾಡಿ ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಈ ವಿಷಯವನ್ನು ಸಿ.ಡಿ.ಪಿ.ಓ ಅವರಿಗೆ ತಿಳಿಸಿದರು ಅವರು ಕಣ್ಣುಮುಚ್ಚಿಕೊಂಡು ಕುಳಿತುಕೊಂಡಿದ್ದಾರೆ ಎಂದು ಆರೋಪಿಸಿದರು.
ನಮ್ಮ ಲಕ್ಷ್ಮೇಶ್ವರ ಪಟ್ಟಣದಲ್ಲಿ ಅಷ್ಟೇ ಅಲ್ಲ ಈ ಸಮಸ್ಯೆಯೂ ಲಕ್ಷ್ಮೇಶ್ವರ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಇದ್ದರೂ ಸಿ.ಡಿ.ಪಿ.ಓ.ಮಾತ್ರ ನನಗೆ ಏನು ಗೊತ್ತಿಲ್ಲ ಹಾಗೇ ಕುಳಿತುಕೊಂಡಿದ್ದಾರೆ. ಸಿ.ಡಿ.ಪಿ.ಓ. ಅವರಿಗೆ ಇದನ್ನೆಲ್ಲ ತಿಳಿಸಿದರು ಸುಮ್ಮನೆ ಕುಳಿತುಕೊಳ್ಳಲು ಕಾರಣವೇನು ಎಂದು ಗೊತ್ತಾಗುತ್ತಿಲ್ಲ ಎಂದು ಕಿಡಿಕಾರಿದರು.
PublicNext
14/01/2022 08:34 am