ಬೆಂಗಳೂರು: ಸಹಾಯಕ ಪ್ರಾಧ್ಯಾಪಕರ ಪರೀಕ್ಷೆ ಪೇಪರ್ ಲೀಕ್ ಪ್ರಕರಣ ಸಂಬಂಧಿಸಿದಂತೆ ಮಲೇಶ್ವರಂ ಪೊಲೀಸರು ಆರೋಪಿ ಸೌಮ್ಯಳನ್ನು ಬಂಧಿಸಿದ್ದಾರೆ.
ಮೈಸೂರು ಮೂಲದ ಸೌಮ್ಯಾ (32) ವಾಟ್ಸಾಪ್‌ನಲ್ಲಿ ಹಲವರಿಗೆ ಪ್ರಶ್ನೆ ಪತ್ರಿಕೆ ಫಾವರ್ಡ್ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆಯೇ ಸೌಮ್ಯಾಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಒಂದಷ್ಟು ಮಾಹಿತಿ ಕಲೆ ಹಾಕಿದ್ದರು. ನಿನ್ನೆ ಸರ್ಕಾರಿ ರಜೆ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಪೊಲೀಸರು ಇಂದು ಮತ್ತೆ ಕಸ್ಟಡಿಗೆ ಪಡೆದು ಸೌಮ್ಯ ವಿಚಾರಣೆ ನಡೆಸಲಿದ್ದಾರೆ.
ಈ ಪ್ರಶ್ನೆ ಪತ್ರಿಕೆ ನೀಡಿದವರು ಯಾರು? ಎಷ್ಟುಮಂದಿಗೆ ಪ್ರಶ್ನೆ ಪತ್ರಿಕೆ ಫಾವರ್ಡ್ ಮಾಡಲಾಗಿದೆ? ಈ ಪ್ರಶ್ನೆ ಪತ್ರಿಕೆ ಸೋರಿಕೆಯ ಕಿಂಗ್ ಪಿನ್ ಯಾರು ಎಂಬುದು ಸೇರಿದಂತೆ ಪಶ್ನೆ ಪತ್ರಿಕೆ ಸೋರಿಕೆಯ ಮೂಲ ಪತ್ತೆಗೆ ಪೊಲೀಸರು ಕೈ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಹಾಯಕ ಪ್ರಾಧ್ಯಾಪಕರ ಪರೀಕ್ಷೆ ಪತ್ರಿಕೆಗಳು ಮೊಬೈಲ್‌ನಲ್ಲಿ ಹರಿದಾಡಿದ್ದವು. ಈ ಹಿನ್ನೆಲೆಯಲ್ಲಿ ಕೆಇಎ ತನಿಖೆ ನಡೆಸುವಂತೆ ಮಲ್ಲೇಶ್ವರಂ ಠಾಣೆಗೆ ದೂರು ನೀಡಿದ್ದರು.
PublicNext
25/04/2022 11:54 am