ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಹ ನಟಿ ಜೊತೆ ಪತಿಯ ಲವ್ವಿ-ಡವ್ವಿ; ನಡು ರಸ್ತೆಯಲ್ಲೇ ಅಟ್ಟಾಡಿಸಿ ಹೊಡೆದ ಪತ್ನಿ.!

ಭುವನೇಶ್ವರ: ರಾಷ್ಟ್ರಪ್ರಶಸ್ತಿ ವಿಜೇತ ನಟಿ ಪ್ರಕೃತಿ ಮಿಶ್ರಾ ಮೇಲೆ ಮಹಿಳೆಯೊಬ್ಬರು ನಡುರಸ್ತೆಯಲ್ಲಿ ಹಲ್ಲೆ ಮಾಡಿರುವ ಘಟನೆ ಒಡಿಶಾದಲ್ಲಿ ನಡೆದಿದೆ.

ಒಡಿಶಾದ ಜನನಿಬಿಡ ಭುವನೇಶ್ವರ ರಸ್ತೆಯಲ್ಲಿ ಈ ಜಗಳ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಟ ಬಾಬುಸನ್ ಮೊಹಂತಿ ಮತ್ತು ಸಹ ನಟಿ ಪ್ರಕೃತಿ ಮಿಶ್ರಾ ಇಬ್ಬರೂ ಒಟ್ಟಿಗೆ ಕಾರಿನಲ್ಲಿ ಹೋಗುತ್ತಿದ್ದರು. ಅವರನ್ನೇ ಫಾಲೋ ಮಾಡಿಕೊಂಡು ಬಂದ ಪತ್ನಿ ತೃಪ್ತಿ ನಡುರಸ್ತೆಯಲ್ಲೇ ಕಾರನ್ನು ತಡೆದು ನಿಲ್ಲಿಸಿ ತನ್ನ ಪತಿಯ ಪಕ್ಕದಲ್ಲಿ ಕಾರಿನಲ್ಲಿ ಕುಳಿತಿದ್ದ ನಟಿ ಪ್ರಕೃತಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಆಕೆಯ ಕೂದಲನ್ನು ಎಳೆಯಲು ಪ್ರಯತ್ನಿದರು. ನಟಿ ಪ್ರಕೃತಿಯನ್ನು ಆಟೋ ರಿಕ್ಷಾವನ್ನು ಹತ್ತದಂತೆ ತಡೆದು ತನ್ನ ಕುಟುಂಬವನ್ನು ಹಾಳುಮಾಡಿದ್ದಾಳೆ ಎಂದು ಕೂಗಾಡಿದರು. ತೃಪ್ತಿ ತನ್ನ ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದಾಳೆ ಎಂದು ಪ್ರಕೃತಿ ಸಹ ಕೂಗಾಡಿದರು.

ಪ್ರಕೃತಿ ಪಾರಾಗುತ್ತಿದ್ದಂತೆ ತೃಪ್ತಿ ಗಂಡನನ್ನು ತರಾಟೆ ತೆಗೆದುಕೊಂಡರು. ಈ ವಿಚಾರ ಭುವನೇಶ್ವರದ ಖರವೇಲ ನಗರ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

Edited By : Vijay Kumar
PublicNext

PublicNext

25/07/2022 06:25 pm

Cinque Terre

143.52 K

Cinque Terre

8