ಮುಂಬೈ: ಪಂಜಾಬ್ ನ ಗಾಯಕ ಮೋಸೆವಾಲಾ ಹತ್ಯೆ ಬಳಿಕ ಸಲ್ಮಾನ್ ಖಾನ್‌ಗೂ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಈ ಹಿನ್ನೆಲೆಯಲ್ಲಿಯೇ ಸಲ್ಮಾನ್ ಖಾನ್ ಹಾಗೂ ತಂದೆ ಸಲೀಮ್ ಖಾನ್ ಅವರಿಗೆ ಜೀವ ಬೆದರಿಕೆ ಪತ್ರವೂ ಬಂದಿದ್ದು ಈ ಸಂಬಂಧ ಈಗ ಪೊಲೀಸರು ಸಲ್ಮಾನ್ ಖಾನ್ ಹೇಳಿಕೆಯನ್ನ ರೆಕಾರ್ಡ್ ಮಾಡಿದ್ದಾರೆ.
ನನಗೆ ಯಾವುದೇ ರೀತಿ ಬೆದರಿಕೆ ಪತ್ರ ಬಂದಿಯೇ ಇಲ್ಲ. ನಮ್ಮ ತಂದೆಗೂ ಈ ರೀತಿಯ ಬೆದರಿಕೆ ಪತ್ರ ಬಂದಿಲ್ಲ ಎಂದು ಸಲ್ಮಾನ್ ಖಾನ್ ಪೊಲೀಸರಿಗೆ ಕೊಟ್ಟ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನಾನು ಯಾರೊಂದಿಗೂ ಜಗಳ ಮಾಡಿಕೊಂಡಿಲ್ಲ. ಯಾವುದೇ ರೀತಿಯ ವಿವಾದಗಳೂ ಆಗಿಲ್ಲ ಎಂದು ಕೂಡ ಸಲ್ಮಾನ್ ವಿವರಿಸಿದ್ದಾರೆ.
PublicNext
07/06/2022 07:22 pm