ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಾಯಕ ಸಿಧು ಹತ್ಯೆ-ಸಲ್ಲು ಮನೆ ಸುತ್ತ ಹೆಚ್ಚಿದ ಭದ್ರತೆ !

ಮುಂಬೈ: ಪಂಜಾಬ್‌ನ ಪ್ರಖ್ಯಾತ ಗಾಯಕ ಸಿಧು ಮೂಸೆವಾಲಾ ಹತ್ಯೆ ಬಾಲಿವುಡ್ ನಲ್ಲೂ ಆತಂಕ ಮೂಡಿಸಿದೆ. ಸಿಧು ಮೂಸೆವಾಲಾ ಹತ್ಯೆ ಹಿನ್ನೆಲೆಯಲ್ಲಿ ಈಗ ಬಾಲಿವುಡ್ ನಾಯಕ ಸಲ್ಮಾನ್ ಖಾನ್ ಭದ್ರತೆಯನ್ನೂ ಇನ್ನಷ್ಟು ಬಿಗಿಗೊಳಿಸಲಾಗಿದೆ.

ಸಲ್ಮಾನ್ ಖಾನ್ ಇರೋ ಅಪಾರ್ಟ್‌ಮೆಂಟ್ ಸುತ್ತಲೂ ಈಗ ಭದ್ರತೆ ಹೆಚ್ಚಿಸಲಾಗಿದೆ. ಈ ಬಗ್ಗೆ ಈಗಾಗಲೇ ಪೊಲೀಸ್ ಅಧಿಕಾರಿಯೊಬ್ಬರು ಹೇಳಿಕೊಂಡಿದ್ದಾರೆ.

ರಾಜಸ್ಥಾನ ಗ್ಯಾಂಗ್‌ನಿಂದ ಯಾವುದೇ ಅಹಿತರಕರ ಘಟನೆ ನಡೆಯದಂತೆ ನೋಡಿಕೊಳ್ಳಲಾಗುತ್ತಿದೆ. ಈ ಕಾರಣಕ್ಕೇನೆ ಈಗಲೇ ಸಲ್ಮಾನ್ ಖಾನ್ ಮನೆ ಸುತ್ತಲೂ ಬಿಗಿ ಭದ್ರತೆವಹಿಸಲಾಗಿದೆ ಎಂದು ಆ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Edited By :
PublicNext

PublicNext

01/06/2022 03:04 pm

Cinque Terre

47.63 K

Cinque Terre

2