ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಟಿ ಜಾಕ್ವೆಲಿನ್ ಫರ್ನಾಂಡೀಸ್ ಶಾಕ್ ಕೊಟ್ಟ ಇಡಿ- 7.27 ಕೋಟಿ ರೂ. ಆಸ್ತಿ ಜಪ್ತಿ

ಮುಂಬೈ: ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರ 7.27 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡಿದೆ.

ವಂಚಕ ಸುಕೇಶ್ ಚಂದ್ರಶೇಖರ್ ಮತ್ತಿತರರ ವಿರುದ್ಧದ ಕ್ರಿಮಿನಲ್ ತನಿಖೆಗೆ ಸಂಬಂಧಿಸಿದಂತೆ ಹಣ ವರ್ಗಾವಣೆ ವಿರೋಧಿ ಕಾನೂನು ಅಡಿಯಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಆಸ್ತಿಯನ್ನು ಇಡಿ ವಶಕ್ಕೆ ಪಡೆದಿದೆ. ನಟಿ ಜಾಕ್ವೆಲಿನ್, ಸುಕೇಶ್ ನಡುವೆ ಅಕ್ರಮ ಹಣ ವರ್ಗಾವಣೆ ಆಗಿರುವ ಬಗ್ಗೆ ಸಾಕ್ಷ್ಯಾಧಾರಗಳನ್ನು ಜಾರಿ ನಿರ್ದೇಶನಾಲಯ ಕಲೆಹಾಕಿತ್ತು. ಜ್ಯಾಕ್ವೆಲಿನ್‌ರ ವಿರುದ್ಧ 'ಲುಕ್‌ ಔಟ್‌ ಸರ್ಕ್ಯುಲರ್' ಜಾರಿ ಗೊಳಿಸಿ ವಿಚಾರಣೆಗೊಳಪಡಿಸಿತ್ತು.

ಸುಕೇಶ್‌ ಚಂದ್ರಶೇಖರ್‌ ನಿಂದ ಜಾಕ್ವೆಲಿನ್‌ 10 ಕೋಟಿ ರೂ. ಮೌಲ್ಯದ ಉಡುಗೊರೆಗಳನ್ನು ಪಡೆದಿದ್ದು, ಅದರಲ್ಲಿ 52 ಲಕ್ಷ ರೂ. ಮೌಲ್ಯದ ಕುದುರೆ, 9 ಲಕ್ಷ ರೂ. ಮೌಲ್ಯದ ಪರ್ಷಿಯಾ ದೇಶದ ಬೆಕ್ಕು ಸೇರಿದೆ ಎನ್ನುವ ವಿಚಾರ ಬಯಲಾಗಿತ್ತು.

Edited By : Vijay Kumar
PublicNext

PublicNext

30/04/2022 04:35 pm

Cinque Terre

45.5 K

Cinque Terre

0