ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬ್ಯಾನರ್ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಹಾಗೂ ಪುನೀತ್ ಅಭಿಮಾನಿಗಳು ರಾಡ್ ಹಿಡಿದುಕೊಂಡು ಕಿತ್ತಾಡಿಕೊಂಡಿದ್ದಾರೆ.
ಯಲಹಂಕದ ಅರಕೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಭೈರಾಪುರದಲ್ಲಿ ಗಲಾಟೆ ಆಗಿದೆ. ಈ ಗ್ರಾಮದಲ್ಲಿ ಪುನೀತ್ ಅಭಿಮಾನಿಗಳು ಬ್ಯಾನರ್ ಹಾಕಿದ್ದರು. ಇದನ್ನ ತೆರವುಗೊಳಿಸಲೇಬೇಕು ಅಂತಲೇ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಆಗಲೇ ಗಲಾಟೆ ನಡೆದು ಹೋಗಿದೆ.
ಪೊಲೀಸರು ಮಧ್ಯೆ ಪ್ರವೇಶಿಸಿ ಈಗ ಗಲಾಟೆಯನ್ನ ತಿಳಿಗೊಳಿಸಿದ್ದಾರೆ. ಪುನೀತ್ ಬ್ಯಾನರ್‌ನ್ನೂ ತೆರೆವುಗೊಳಿಸಿದ್ದಾರೆ. ಆದರೆ, ಬ್ಯಾನರ್ ಮತ್ತೆ ಹಾಕಲೇಬೇಕು ಅಂತಲೇ ಪುನೀತ್ ಅಭಿಮಾನಿಗಳು ಪಟ್ಟುಹಿಡಿದಿದ್ದಾರೆ.
PublicNext
18/04/2022 01:27 pm