ಬೆಂಗಳೂರು: ರಾಕಿ ಭಾಯ್ ಬಹುನಿರೀಕ್ಷಿತ ಚಿತ್ರ ಕೆಜಿಎಫ್ 2 ಸಿನಿಮಾ ವಿಶ್ವದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ ಚಿತ್ರಕ್ಕೆ ಪೈರಸಿ ಕಾಟ ಎದುರಾಗಿದೆ.ಇಡೀ ಚಿತ್ರ ಕೆಲ ವೆಬ್ ಸೈಟ್ ಗಳಲ್ಲಿ ಲಿಕ್ ಆಗಿದೆ. ಚಿತ್ರದ ಮೊದಲ ದಿನವೇ ಕೆಲ ಕಿಡಿಗೇಡಿಗಳು ಇಡೀ ಚಿತ್ರವನ್ನು ರೆಕಾರ್ಡ್ ಮಾಡಿ ಅದರ ಲಿಂಕ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಇದರಿಂದ ಬಾಕ್ಸ್ ಆಫೀಸ್ ಕಲೆಕ್ಷನ್ ಗೆ ಹೊಡೆತ ಬೀಳುವ ಸಾಧ್ಯತೆ ಇದೆ. ಹೀಗಾಗಿ ಅಭಿಮಾನಿಗಳು ಪೈರಸಿ ಕಾಪಿ ನೋಡದಂತೆ ಎಲ್ಲರ ಬಳಿ ಮನವಿ ಮಾಡಿಕೊಂಡಿದ್ದಾರೆ. ನಿನ್ನೆಯಷ್ಟೇ ನಿರ್ದೇಶಕರು ಸಹ ಪೈರಸಿ ವಿರುದ್ಧದ ಹೋರಾಟಕ್ಕೆ ಕರೆ ನೀಡಿದ್ದಾರೆ.
'ಕೆಜಿಎಫ್ ನಿಮಗೆ ನೀಡುವ ಸಲುವಾಗಿ ಎಂಟು ವರ್ಷಗಳ ಕಾಲ ರಕ್ತ, ಬೆವರು, ಕಣ್ಣೀರು ಹರಿಸಲಾಗಿದೆ. ನಿಮ್ಮೆಲ್ಲರಲ್ಲಿ ನಮ್ಮ ಕೋರಿಕೆ ಏನೆಂದರೆ ದಯವಿಟ್ಟು ನೀವ್ಯಾರೂ ಚಿತ್ರಮಂದಿರಗಳಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರದ ದೃಶ್ಯಗಳನ್ನು ವಿಡಿಯೋ ಮಾಡಿಕೊಂಡು ಇಂಟರ್ನೆಟ್ನಲ್ಲಿ ಅಪ್ಲೋಡ್ ಮಾಡಬೇಡಿ ಎಂದು ಮನವಿ ಮಾಡಿದ್ದರು.
PublicNext
14/04/2022 12:46 pm