ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭೀಕರ ರಸ್ತೆ ಅಪಘಾತ; ಸೋಶಿಯಲ್ ಮೀಡಿಯಾ ಸ್ಟಾರ್ ಡಾಲಿ ಡಿಕ್ರೂಜ್ ಸಾವು

ಹೈದರಾಬಾದ್: ದಕ್ಷಿಣ ಭಾರತದ ಖ್ಯಾತ ಸೋಶಿಯಲ್ ಮೀಡಿಯಾ ಸ್ಟಾರ್ ಡಾಲಿ ಡಿಕ್ರೂಜ್ ರಸ್ತೆ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಈ ನಟಿ ಗಾಯತ್ರಿ ಎಂದೇ ಖ್ಯಾತಿಯನ್ನು ಪಡೆದುಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಈ ಅಪಘಾತದಲ್ಲಿ ಗಾಯತ್ರಿ ಮಾತ್ರವಲ್ಲ ಕಾರಿನಲ್ಲಿದ್ದ ರಾಥೋಡ್ ಮತ್ತು ಮಹಿಳೆಯೊಬ್ಬರು ಕೂಡ ಸಾವನ್ನಪ್ಪಿದ್ದಾರೆ. ಹೆಚ್ಚು ವೇಗದಲ್ಲಿ ಬಂದ ಕಾರಣವೇ ಈ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ಪೊಲೀಸರು ತಿಳಿಸಿದ್ದಾರೆ.

ಸುದ್ದಿ ತಿಳಿದ ತಕ್ಷಣ ತೆಲುಗು ಸಿನಿ ಮಂದಿ ಅಘಾತಗೊಂಡಿದ್ದಾರೆ. ನಟಿ ಸುರೇಖಾ ವಾಣಿ ಮತ್ತು ಮಗಳು ಸುಪ್ರಿಯಾ ಗಾಯತ್ರಿ ಸಾವಿನ ಸುದ್ದಿ ಕೇಳಿ ಭಾವುಕರಾಗಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿಯೂ ಬರೆದುಕೊಂಡಿದ್ದಾರೆ.

ನಿಜಕ್ಕೂ ಇದು ಅನ್ಯಾಯ. ಈ ಸುದ್ದಿಯನ್ನು ನಾನು ಅರಗಿಸಿಕೊಳ್ಳಲು ಆಗುತ್ತಿಲ್ಲ. ನಾನು ಗಾಯತ್ರಿ ಜೊತೆ ಒಳ್ಳೆಯ ನೆನಪುಗಳನ್ನು ಹೊಂದಿದ್ದೆ. ನನಗೆ ಆಕೆ ತುಂಬಾ ಆತ್ಮೀಯಳು. ಈ ಸುದ್ದಿ ಕೇಳಿ ನಾನು ಅಘಾತಕ್ಕೆ ಒಳಗಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಗಾಯಿತ್ರಿ ಅವರು ಹಲವು ಕಿರುಚಿತ್ರಗಳಲ್ಲಿ ನಟಿಸಿದ್ದರು. ಇತ್ತೀಚೆಗೆ ‘ಮೇಡಂ ಸರ್ ಮೇಡಂ ಅಂಥೆ’ ವೆಬ್ ಸರಣಿಯಲ್ಲಿಯೂ ಅಭಿನಯಿಸಿದ್ದರು.

Edited By : Vijay Kumar
PublicNext

PublicNext

19/03/2022 05:49 pm

Cinque Terre

88.23 K

Cinque Terre

2