ಮುಂಬಯಿ : 2007ರಲ್ಲಿ ರಾಜಸ್ಥಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಟಿ ಶಿಲ್ಪಾ ಶೆಟ್ಟಿ ಭಾಗಿಯಾಗಿದ್ದರು. ಈ ವೇಳೆ ಹಾಲಿವುಡ್ ನಟ ರಿಚರ್ಡ್ ಗಿಯರ್ ತುಂಬಿದ ಸಭೆಯಲ್ಲಿಯೇ ಶಿಲ್ಪಾ ಕೆನ್ನೆಗೆ ಮುತ್ತಿಟ್ಟ ಅಶ್ಲೀಲ ವರ್ತನೆ ತೋರಿದ್ದರು. ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು.
ಅಷ್ಟೇ ಅಲ್ಲದೇ ಕೇಸ್ ಕೂಡಾ ದಾಖಲಾಗಿತ್ತು. ಸದ್ಯ ಇದೇ ಕೇಸ್ ಗೆ ಸಂಬಂಧಿಸಿದಂತೆ ಸುಮಾರು 15 ವರ್ಷಗಳ ನಂತರ, ಮುಂಬೈ ಕೋರ್ಟ್ ನಟಿ ಶಿಲ್ಪಾ ಶೆಟ್ಟಿಯವರನ್ನು ಈ ಪ್ರಕರಣದಿಂದ ಬಿಡುಗಡೆ ಮಾಡಿದೆ. ಶಿಲ್ಪಾ ಶೆಟ್ಟಿ ಕೃತ್ಯದಲ್ಲಿ ಸಂತ್ರಸ್ತೆ ಎಂದು ತೋರುತ್ತದೆ ಎಂದು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೇತ್ಕಿ ಚವ್ಹಾಣ್ ಅವರಿದ್ದ ನ್ಯಾಯಾಲಯ ಪೀಠ ಜನವರಿ 18 ರಂದು ಶಿಲ್ಪಾ ಶೆಟ್ಟಿಯವರನ್ನು ಪ್ರಕರಣದಿಂದ ಬಿಡುಗಡೆಗೊಳಿಸಿದೆ. ಸೋಮವಾರ ವಿವರವಾದ ಆದೇಶದ ಪ್ರತಿ ಲಭ್ಯವಾಗಿದೆ.
2007 ರಲ್ಲಿ, ರಾಜಸ್ಥಾನದಲ್ಲಿ ಏಡ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ಗಿಯರ್ ಅವರು ವೇದಿಕೆಯಲ್ಲೇ ಶಿಲ್ಪಾರನ್ನು ಅಪ್ಪಿ ಕೆನ್ನೆಗೆ ಮುತ್ತಿಟ್ಟಿದ್ದು ದೇಶದಲ್ಲಿ ಸಂಚಲನ ಮೂಡಿಸಿತ್ತು. 2017 ರಲ್ಲಿ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ರಾಜಸ್ಥಾನದ ಮ್ಯಾಜಿಸ್ಟ್ರೇಟ್ ಪ್ರಥಮ ದರ್ಜೆ ನ್ಯಾಯಾಲಯದಿಂದ ಪ್ರಕರಣವನ್ನು ಮುಂಬೈಗೆ ವರ್ಗಾಯಿಸಲಾಗಿತ್ತು.
ದೂರಿಗೆ ಲಗತ್ತಿಸಲಾದ ಯಾವುದೇ ಸುದ್ದಿ ವರದಿಗಳು ಸಾಮಾನ್ಯ ಉದ್ದೇಶವನ್ನು ಪ್ರದರ್ಶಿಸಿಲ್ಲ ಎಂದು ಮುಂಬೈ ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದೆ.
PublicNext
25/01/2022 06:07 pm