ಢಾಕಾ: ಇತ್ತೀಚೆಗೆ ಕಾಣೆಯಾಗಿದ್ದ ಬಾಂಗ್ಲಾದೇಶದ ಖ್ಯಾತ ನಟಿ ರೈಮಾ ಇಸ್ಲಾಂ ಶಿಮಿ ಢಾಕಾ ಬಳಿಯ ಖೈರಾನಿಗಂಜ್ ವ್ಯಾಪ್ತಿಯ ಸೇತುವೆಯ ತಟದಲ್ಲಿ ಹೆಣವಾಗಿ ಪತ್ತೆಯಾಗಿದ್ದಾರೆ.
ನಟಿ ರೈಮಾ ಇಸ್ಲಾಂ ಶಿಮಿ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದಾರೆ ಎಂದು ಪತಿ ಶೆಕಾವತ್ ಅಲಿ ನೋಬಲ್ ಕಾಳಬಂಗನ್ ಠಾಣೆಯಲ್ಲಿ ಕೇಸ್ ದಾಖಲಸಿದ್ದರು. ಕೇಸ್ ದಾಖಲಾದ 3 ದಿನದಲ್ಲಿ ನಟಿ ಹೆಣವಾಗಿ ಪತ್ತೆಯಾಗಿದ್ದಾರೆ.
ನಟಿಯ ಮೃತದೇಹದ ಮೇಲೆ ಸಾಕಷ್ಟು ಚುಚ್ಚಿದ ಗಾಯಗಳಿವೆ. ಹೀಗಾಗಿ ಪತಿಯ ಮೇಲೆ ಅನುಮಾನ ವ್ಯಕ್ತಪಡಿಸಿದ ಪೊಲೀಸರು ಆತನನ್ನು ಮತ್ತು ಆತನ ಕಾರ್ ಚಾಲಕನನ್ನು ಅರೆಸ್ಟ್ ಮಾಡಿ ವಿಚಾರಣೆ ಗೊಳಪಡಿಸಿದ್ದಾರೆ. ಈ ವೇಳೆ ಪತಿ ಶೆಕಾವತ್ ತಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಈ ಕೃತ್ಯದಲ್ಲಿ ಇನ್ನು ಹಲವು ಬಾಂಗ್ಲಾ ಕಲಾವಿದರ ಕೈವಾಡವಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸದ್ಯ ಇಬ್ಬರು ಆರೋಪಿಗಳನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದು, ನಟಿಯ ಮರಣೋತ್ತರ ವರದಿಗಾಗಿ ಕಾಯುತ್ತಿದ್ದಾರೆ.
PublicNext
19/01/2022 02:55 pm