ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಾಯಕಿ ಮಂಗಲಿಬಾಯಿಗೆ ಪಡ್ಡೆಗಳ ಕಾಟ: ಯುವಕರ ಮೇಲೆ ಸಿಡಿದೆದ್ದ ಸಿಂಗರ್

ಒಂಗೋಲ್(ಆಂಧ್ರ ಪ್ರದೇಶ): ವಿಶಿಷ್ಟ ಧ್ವನಿಯ ಮೂಲಕ ಈಗಾಗಲೇ ಬಹುಭಾಷಾ ಸ್ಟಾರ್ ಸಿಂಗರ್ ಆಗಿರುವ ಮಂಗಲಿಬಾಯಿ ಕನ್ನಡದಲ್ಲೂ ಅನೇಕ ಹಾಡುಗಳನ್ನು ಹಾಡಿ ಫೇಮಸ್ ಆಗಿದ್ದಾರೆ.

ಇತ್ತೀಚೆಗಷ್ಟೇ ಗಾಯಕಿ ಮಂಗಲಿ ಅವರು ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಒಂಗೋಲ್ ಪಟ್ಟಣಕ್ಕೆ ಕಾರ್ಯಕ್ರಮ ನೀಡಲು ತೆರಳಿದಾಗ ಯುವಕರು ಅವರನ್ನು ಸುತ್ತುವರೆದು ಸೆಲ್ಫಿ ಕ್ಲಿಕ್ಕಿಸಲು ಮುಗಿಬಿದ್ದಿದ್ದಾರೆ. ಆಗ ಮಂಗಲಿ ತೀವ್ರ ಮುಜುಗರ ಅನುಭವಿಸಿದ್ದಾರೆ. ಇದೇ ವೇಳೆ ಕೆಲ ಯುವಕರು ಅಸಭ್ಯವಾಗಿ ವರ್ತಿಸಿದ್ದಾರೆ. ಇದರಿಂದ ಕುಪಿತಗೊಂಡ ಗಾಯಕಿ ಮಂಗಲಿ ಅವರು ಕೂಗಾಡಿದ್ದಾರೆ ಮತ್ತು ಒಬ್ಬ ಯುವಕನನ್ನು ಕೈಯಿಂದ ಹೊಡೆಯಲು ಮುಂದಾಗಿದ್ದಾರೆ. ಕೂಗಿದರೂ ಸ್ಥಳಕ್ಕೆ ಬಾರದ ತಮ್ಮ ಸಹಾಯಕರ ಮೇಲೆ ರೇಗಾಡಿದ್ದಾರೆ. ನಂತರ ಕಾರು ಚಾಲಕನಿಗೆ ಕರೆ ಮಾಡಿ ಸ್ಥಳಕ್ಕೆ ಕಾರು ತರಿಸಿಕೊಂಡು ಅಲ್ಲಿಂದ ನಿರ್ಗಮಿಸಿದ್ದಾರೆ.

Edited By : Manjunath H D
PublicNext

PublicNext

29/12/2021 05:22 pm

Cinque Terre

96.79 K

Cinque Terre

3