ಚೆನ್ನೈ: ಕಾಲಿವುಡ್ ಸೂಪರ್ ಸ್ಟಾರ್ ವಿಜಯ್ ಅವರು ತಮ್ಮ ತಂದೆ-ತಾಯಿ ವಿರುದ್ಧವೇ ಕೋರ್ಟ್ ಮೆಟ್ಟಿಲೇರಿದ್ದಾರೆ.
ಹೌದು. ನನ್ನ ಹೆಸರನ್ನು ಬಳಸಿಕೊಂಡು ನನ್ನ ಎಸ್.ಎ.ಚಂದ್ರಶೇಖರ್ ಮತ್ತು ತಾಯಿ ಶೋಭಾ ಹಾಗೂ ಸಹೋದರ ಸಂಬಂಧಿಗಳು ಸೇರಿ ವಿಜಯ್ ಮಕ್ಕಳ್ ಇಯಕ್ಕಮ್ (ವಿಎಂಐ) ಎಂಬ ಹೆಸರಿನ ಕಲ್ಯಾಣ ಸಂಸ್ಥೆಯನ್ನು ಆರಂಭಿಸಿದ್ದಾರೆ. ಆದರೆ ನನಗೂ ಆ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ. ನನ್ನ ಕುಟುಂಬ ನನ್ನ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ನಟ ದೂರಿದ್ದಾರೆ.
ನಟ ವಿಜಯ್ ಅವರ ತಂದೆ ಎಸ್.ಎಂ ಚಂದ್ರಶೇಖರ್. ತಾಯಿ ಶೋಭಾ ಹಾಗೂ ಸಹೋದರ ಸಂಬಂಧಿ ಪದ್ಮನಾಭನ್ ಸೇರಿ ವಿಜಯ್ ಮಕ್ಕಳ್ ಇಯಕ್ಕಮ್ (ವಿಎಂಐ) ಎಂಬ ಹೆಸರಿನ ಕಲ್ಯಾಣ ಸಂಸ್ಥೆಯನ್ನು ತನ್ನ ಹೆಸರಿನಲ್ಲಿ ಆರಂಭಿಸಿದ್ದಾರೆ. ಹಾಗೂ ಆಲ್ ಇಂಡಿಯಾ ಕಮ್ಯಾಂಡರ್ ವಿಜಯ್ ಪೀಪಲ್ ಮೂವ್ಮೆಂಟ್ ಎಂಬ ಪಾರ್ಟಿಯನ್ನು ಆರಂಭಿಸಿದ್ದಾರೆ. ಈ ಪಕ್ಷಕ್ಕೆ ಪದ್ಮನಾಭನ್ ನಾಯಕರಾಗಿದ್ದು, ವಿಜಯ್ ಪೋಷಕರು ಆ ಪಕ್ಷದ ಖಜಾಂಚಿಗಳಾಗಿದ್ದಾರೆ. ಆದರೆ ಈ ಪಾರ್ಟಿಯಲ್ಲಿ ನನ್ನ ಪಾತ್ರವೇನು ಇಲ್ಲ ಎಂದು ನಟ ವಿಜಯ್ ಸ್ಪಷ್ಟನೆ ನೀಡಿದ್ದಾರೆ.
ಇದೇ ವಿಚಾರವಾಗಿ ನಟ ವಿಜಯ್ ಕೋರ್ಟ್ ಮೆಟ್ಟಿಲೇರಿದ್ದಾರೆ. ವಿಎಂಐ ಸಂಸ್ಥೆಯು ಸಭೆಗಳನ್ನು ನಡೆಸುವುದು ನಿಷೇಧಿಸುವಂತೆ ಕೋರಿ ಅರ್ಜಿಸಲ್ಲಿಸಿದ್ದಾರೆ. ಈ ಪ್ರಕರಣದ ವಿಚಾರಣೆಯ ಸಮಯದಲ್ಲಿ ವಿಜಯ್ ತಾಯಿ ಪರವಾಗಿ ತಂದೆ ಚಂದ್ರಶೇಖರ್ ಅವರು ಪ್ರತ್ಯುತ್ತರ ಅರ್ಜಿಯನ್ನು ಸಲ್ಲಿಸಿದ್ದಾರೆ. ಆದ್ರೆ, ವಿಜಯ ಪರ ವಕೀಲ ಕೋರ್ಟ್ ಗೆ ಹಾಜರಾಗಿರದ ಕಾರಣ ಈ ಪ್ರಕರಣವನ್ನು ಹೈಕೋರ್ಟ್ ಸೆ.27ಕ್ಕೆ ಮುಂದೂಡಿದೆ.
PublicNext
19/09/2021 04:06 pm