ಕೊಪ್ಪಳ: ಸಮಾಜದಲ್ಲಿ ಮಹಿಳೆಯನ್ನು ಹೇಗೆ ಗೌರವಿಸಬೇಕೆಂದು ಗಂಡು ಮಕ್ಕಳಿಗೆ ಮನೆಯಲ್ಲಿ ಹೇಳಿ ಕೊಡಬೇಕು ಎಂದು ನಟಿ ಪೂಜಾ ಗಾಂಧಿ ಹೇಳಿದ್ದಾರೆ.
ಮೈಸೂರು ಯುವತಿ ಮೇಲಿನ ಗ್ಯಾಂಗ್ ರೇಪ್ ಪ್ರಕರಣ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೇರೆ ರಾಜ್ಯಗಳಲ್ಲಿ ಇಂತಹ ಘಟನೆಗಳು ನಡೆದಿದ್ದನ್ನು ಕೇಳಿದ್ದೆವು. ಆದರೆ ಇಂತಹ ಘಟನೆಗಳು ನಮ್ಮಲ್ಲೇ ನಡೆಯುತ್ತಿವೆ. ನಮ್ಮ ಮೈಸೂರು ನಗರದಲ್ಲಿ ಈ ಘಟನೆ ನಡೆದಿರೋದು ನಿಜಕ್ಕೂ ಬೇಸರದ ಸಂಗತಿ. ತ್ವರತವಾಗಿ ಪ್ರಕರಣದ ತನಿಖೆ ಆಗಿ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗಬೇಕು ಎಂದು ಪೂಜಾ ಗಾಂಧಿ ಒತ್ತಾಯಿಸಿದ್ದಾರೆ.
PublicNext
28/08/2021 05:35 pm