ಬೆಂಗಳೂರು/ನೆಲಮಂಗಲ: ಸೂಕ್ತ ದಾಖಲೆಗಳಿಲ್ಲದೇ ಚಲಾಯಿಸಲಾಗುತ್ತಿದ್ದ ವಾಹನಗಳನ್ನು ಬೆಂಗಳೂರು ಸಾರಿಗೆ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಅದರಲ್ಲಿ ಅಮಿತಾಭ್ ಬಚ್ಚನ್ ಅವರಿಂದ ಖರೀದಿಸಲಾಗಿದ್ದು ಎನ್ನಲಾದ ರೋಲ್ಸ್ ರಾಯ್ಸ್ ಕಾರು ಕೂಡ ಸೇರಿತ್ತು. ಈ ಕಾರನ್ನು ಈಗ ಸಾರಿಗೆ ಅಧಿಕಾರಿಗಳು ರಿಲೀಸ್ ಮಾಡಿದ್ದಾರೆ.
ಬೇರೆ ರಾಜ್ಯದ ಕಾರುಗಳು ತೆರಿಗೆ ವಂಚಿಸಿ ಕರ್ನಾಟಕ ರಾಜ್ಯದಲ್ಲಿ ಸಂಚಾರ ಮಾಡುತ್ತಿದ್ದ ಹಿನ್ನೆಲೆ ಬೆಂಗಳೂರಿನ ಸ್ಪೆಷಲ್ ತಂಡದ ಆರ್‌ಟಿಓ ಅಧಿಕಾರಿಗಳು ನಗರದ ಯುಬಿ ಸಿಟಿ ಹಾಗೂ ಇನ್ನಿತರ ಕಡೆ ದಾಳಿ ನಡೆಸಿ ವಾಹನಗಳನ್ನು ವಶಕ್ಕೆ ಪಡೆದಿದ್ದರು. ಈ ವೇಳೆ ಬಾಬು ಎಂಬವರು ಅಮಿತಾಭ್ ಬಚ್ಚನ್ ಬಳಿ ಖರೀದಿಸಿದ್ದ ರೋಲ್ಸ್ ರಾಯ್ಸ್ ಕಾರನ್ನು ಅಧಿಕಾರಿಗಳು ಸೀಜ್ ಮಾಡಿದ್ದರು. ಸದ್ಯ ಆರ್‌ಟಿಓ ಅಧಿಕಾರಿಳಿಗೆ ಈ ಕಾರಿನ ದಾಖಲೆಗಳನ್ನು ನೀಡಿ ತೆರಿಗೆ ಕಟ್ಟಿ ರಿಲೀಸ್ ಮಾಡಿದ್ದಾರೆ.
PublicNext
27/08/2021 06:20 pm