ಬೆಂಗಳೂರು: 'ಮಾದಕ' ನಟಿ ರಾಗಿಣಿ ದ್ವಿವೇದಿ ಡ್ರಗ್ಸ್ ಸೇವಿಸುತ್ತಿದ್ದರು ಎಂಬ ಮಾಹಿತಿ ವಿಧಿವಿಜ್ಞಾನ ಪ್ರಯೋಗಾಲಯದಿಂದ ಸಾಬೀತಾಗಿದೆ. ಇದರ ಬೆನ್ನಲ್ಲೇ ಖ್ಯಾತ ಕಿರುತೆರೆ ನಿರೂಪಕ ಅಕುಲ್ ಬಾಲಾಜಿ, ರಾಗಿಣಿ ವಿರುದ್ಧ ಸಾಕ್ಷಿ ನುಡಿದಿದ್ದಾರೆ.
ನಟಿ ರಾಗಿಣಿ ಮಾದಕ ದ್ರವ್ಯ ಸೇವನೆ ಮಾಡ್ತಿದ್ದರು. ತಾವು ಮಾದಕ ದ್ರವ್ಯ ಸೇವನೆ ಮಾಡಿ ಬೇರೆಯವರಿಗೂ ಪ್ರಚೋದಿಸುತ್ತಿದ್ದರು ಎಂದು ಸಿಸಿಬಿ ಪೊಲೀಸರ ಎದುರು ಅಕುಲ್ ಬಾಲಾಜಿ ಸಾಕ್ಷ್ಯ ನುಡಿದಿದ್ದಾರೆ. ರಾಗಿಣಿ ವಿರುದ್ಧ ಆಕೆಯ ಡ್ರೈವರ್ ಇಮ್ರಾನ್ ಸೇರಿ ಸುಮಾರು 19 ಮಂದಿಯಿಂದ ಈಗಾಗಲೇ ಹೇಳಿಕೆಗಳನ್ನು ಪಡೆದುಕೊಳ್ಳಲಾಗಿದೆ.
PublicNext
24/08/2021 04:05 pm