ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಫೈಟರ್ ವಿವೇಕ್ ಸಾವಿನ ಕೇಸ್: ಪರಿಹಾರ ಘೋಷಿಸಿದ ನಿರ್ಮಾಪಕ ಗುರು ದೇಶಪಾಂಡೆ

ನಟ ಅಜಯ್ ರಾವ್, ರಚಿತಾ ರಾಮ್ ನಟಿಸಿರುವ 'ಲವ್ ಯು ರಚ್ಚು' ಸಿನಿಮಾದ ಚಿತ್ರೀಕರಣದ ವೇಳೆ ನಡೆದ ಅವಘಡದಲ್ಲಿ ಫೈಟರ್ ವಿವೇಕ್ ಸಾವನ್ನಪ್ಪಿದ್ದು ಇನ್ನೋರ್ವ ವ್ಯಕ್ತಿ ಗಾಯಗೊಂಡಿದ್ದಾನೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡದಿ ಪೊಲೀಸರು ಕೆಲವರನ್ನು ಬಂಧಿಸಿದ್ದಾರೆ. ಆದರೆ ಸಿನಿಮಾ ನಿರ್ಮಾಪಕ ಗುರು ದೇಶಪಾಂಡೆ ಇನ್ನೂ ಪೊಲೀಸರ ಸಂಪರ್ಕಕ್ಕೆ ಸಿಕ್ಕಿಲ್ಲ ಎನ್ನಲಾಗುತ್ತಿದೆ. ಆದರೆ ಈ ನಡುವೆ ನಿರ್ಮಾಪಕ ಗುರು ದೇಶಪಾಂಡೆ, ಮೃತ ವಿವೇಕ್ ಕುಟುಂಬಕ್ಕೆ ಪರಿಹಾರ ನೀಡುವುದಾಗಿ ಹೇಳಿದ್ದಾರೆ.

ಅಜ್ಞಾತ ಸ್ಥಳದಿಂದ ಮೃತ ವಿವೇಕ್ ಅವರ ಚಿಕ್ಕಪ್ಪ ಗೋಪಿ ಅವರನ್ನು ಮೊಬೈಲ್‌ ಮೂಲಕ ಸಂಪರ್ಕಿಸಿರುವ ನಿರ್ಮಾಪಕ ಗುರು ದೇಶಪಾಂಡೆ, ವಿವೇಕ್‌ಗೆ ಪರಿಹಾರವಾಗಿ 10 ಲಕ್ಷ ಹಣ ನೀಡುವುದಾಗಿ ಹೇಳಿದ್ದಾರಂತೆ. ಈ ಬಗ್ಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಗೋಪಿ, ''ಫೈಟ್ ಯೂನಿಯನ್ ನವರು ಕರೆ ಮಾಡಿ ಹತ್ತು ಲಕ್ಷ ಪರಿಹಾರ ಸಿಗುತ್ತದೆ. ಈಗ ಏನು ಕೆಲಸ ಆಗಬೇಕು ಅದು ನೋಡಿ. ಘಟನೆಯಲ್ಲಿ ಯಾರದ್ದೂ ತಪ್ಪಿಲ್ಲ, ಗುರು ಅವರದ್ದೂ ತಪ್ಪಿಲ್ಲ. ಈಗಾಗಲೇ ಪ್ರಕರಣ ದಾಖಲಾಗಿದೆ ತಪ್ಪು ಯಾರದ್ದಿರುತ್ತದೆಯೋ ಅವರಿಗೆ ಶಿಕ್ಷೆ ಆಗಲಿದೆ'' ಎಂದು ಫೈಟ್ ಯೂನಿಯನ್‌ನವರು ಹೇಳಿದ್ದಾರೆ'' ಎಂದಿದ್ದಾರೆ ಮೃತ ವಿವೇಕ್ ಚಿಕ್ಕಪ್ಪ ಗೋಪಿ.

Edited By : Nagaraj Tulugeri
PublicNext

PublicNext

10/08/2021 08:32 pm

Cinque Terre

131.78 K

Cinque Terre

3