ನವದೆಹಲಿ: ಜವಾಹರ್ ಲಾಲ್ ನೆಹರು ವಿವಿಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ನಟಿ ದೀಪಿಕಾ ಪಡುಕೋಣೆ ಪಾಕಿಸ್ತಾನದ ಏಜೆಂಟ್ ಒಬ್ಬರಿಂದ ಬರೋಬ್ಬರಿ 5 ಕೋಟಿ ಹಣ ಪಡೆದಿದ್ದರು ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಈಗಾಗಲೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆ ಶುರು ಹಚ್ಚಿಕೊಂಡಿದ್ದಾರೆ.
ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಶೋಧನೆ ಹಾಗೂ ವಿಶ್ಲೇಷಣೆ ವಿಭಾಗದ ಮಾಜಿ ಅಧಿಕಾರಿ ಎನ್.ಕೆ ಸೂದ್ ಅವರು ನಟಿ ದೀಪಿಕಾ ಪಡುಕೋಣೆ ಮೇಲೆ ಈ ರೀತಿ ಆರೋಪ ಮಾಡಿದ್ದು ಈ ಬಗ್ಗೆ ಮತ್ತಷ್ಟು ದಟ್ಟ ಅನುಮಾನಗಳು ಮೂಡಿವೆ.
ಪಾಕಿಸ್ತಾನ ಏಜೆಂಟ್ ಅನಿಲ್ ಮುಸ್ರತ್ ಎಂಬಾತ ದೆಹಲಿಯ ಜೆ.ಎನ್.ಯು ವಿವಿಯಲ್ಲಿ ಕಳೆದ ವರ್ಷ ನಡೆದಿದ್ದ ಸಿ.ಎ.ಎ ವಿರುದ್ಧದ ಹೋರಾಟದಲ್ಲಿ ಪಾಲ್ಗೊಳ್ಳಲು ತಿಳಿಸಿದ್ದರು. ಇದಕ್ಕಾಗಿ ಅವರು 5 ಕೋಟಿ ಹಣದ ಆಫರ್ ಕೊಟ್ಟಿದ್ದರು. ಇದರೊಂದಿಗೆ ನಟಿ ದೀಪಿಕಾ ಪಡುಕೋಣೆ ಇಂತಹ ಇನ್ನೂ ಹಲವಾರು ದೇಶದ್ರೋಹಿ ಕೃತ್ಯಗಳಲ್ಲಿ ಪಾಲ್ಗೊಂಡಿದ್ದಾರೆ ಎಂದು ಎನ್.ಕೆ ಸೂದ್ ಆರೋಪಿಸಿದ್ದಾರೆ.
PublicNext
05/08/2021 01:50 pm