ಬಾಲಿವುಡ್ ಸಿಂಗರ್, ರ‍್ಯಾಪರ್ ಯೋ ಯೋ ಹನಿ ಸಿಂಗ್ ಅಂದ್ರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಅವರ ಹಾಡುಗಳ ಮೂಲಕ ಸದಾ ಸುದ್ದಿಯಾಗುತ್ತಿದ್ದ ಅವರು, ಇದೀಗ ಮತ್ತೆ ಸುದ್ದಿಯಾಗುತ್ತಿದ್ದಾರೆ.
ಹೌದು. ಕುಡಿತ, ಡ್ರಗ್ಸ್ ಅಂತ ಜಾಸ್ತಿ ತಗೊಂಡು ರಿಹ್ಯಾಬಿಲೇಷನ್ ಸೆಂಟರ್ಗೆ ಹೋಗಿದ್ದ ಹನಿ ಸಿಂಗ್, ಎಲ್ಲವನ್ನೂ ಬಿಟ್ಟು ತಮ್ಮ ಫ್ಯಾಮಿಲಿ, ಹೆಂಡ್ತಿ ಅಂತ ಇದ್ದರು. ಇದೀಗ ಮತ್ತೆ ಹನಿಸಿಂಗ್ ತೊಂದರೆಗೊಳಗಾಗಿದ್ದಾರೆ. ಹನಿಸಿಂಗ್ರ ಪತ್ನಿ ಶಾಲಿನಿ ತಲ್ವಾರ್ ಪತಿ ವಿರುದ್ಧ ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಕೇಸ್ ದಾಖಲು ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹನಿ ಸಿಂಗ್ ಅವರ ಪತ್ನಿ ಶಾಲಿನಿ ತಲ್ವಾರ್ ಪರ ವಕೀಲ ಸಂದೀಪ್ ಕಪೂರ್, ಅಪೂರ್ವ ಪಾಂಡೆ ಮತ್ತು ಜಿಜಿ ಕಶ್ಯಪ್, ಕಾನೂನು ಸಂಸ್ಥೆಯಾದ ಕರಂಜಾವಾಲಾ ಆಗಸ್ಟ್ 28, 2021 ರೊಳಗೆ ತನ್ನ ಉತ್ತರವನ್ನು ಸಲ್ಲಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಅದಕ್ಕೆ, ನ್ಯಾಯಾಲಯವು ಈಗ ಗಾಯಕ ಹನಿಸಿಂಗ್‌ಗೆ ನೋಟಿಸ್ ನೀಡಿದೆ.
PublicNext
03/08/2021 08:58 pm