ಬೆಂಗಳೂರು: ನನ್ನ ಅಂತ್ಯಕ್ರಿಯೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಪಾಲ್ಗೊಳ್ಳಬೇಕೆಂದು ಡೆತ್ ನೋಟ್ ಬರೆದಿಟ್ಟು ರಾಮಕೃಷ್ಣ ಎಂಬ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂಡ್ಯ ಜಿಲ್ಲೆ ಕೋಡಿದೊಡ್ಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಈ ಆತಂಕಕಾರಿ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ನಟ ಯಶ್, ಅಭಿಮಾನಿಗಳ ಅಭಿಮಾನವೇ ನಮ್ಮ ಬದುಕು, ಜೀವನ, ಹೆಮ್ಮೆ. ಆದರೆ ಮಂಡ್ಯದ ರಾಮಕೃಷ್ಣನ ಅಭಿಮಾನಕ್ಕೆ ಹೆಮ್ಮೆಪಡಲು ಸಾಧ್ಯವೇ? ಅಭಿಮಾನಿಗಳ ಅಭಿಮಾನಕ್ಕೆ ಇದು ಮಾದರಿಯಾಗದಿರಲಿ. ಕೋಡಿ ದೊಡ್ಡಿ ರಾಮಕೃಷ್ಣನ ಆತ್ಮಕ್ಕೆ ಚಿರಶಾಂತಿ ಸಿಗಲಿ. ಓಂ ಶಾಂತಿ ಎಂದು ಟ್ವೀಟ್ ಮಾಡಿದ್ದಾರೆ.
ನಿನ್ನೆ ಮಂಡ್ಯ ಜಿಲ್ಲೆಯ ಕೆರಗೋಡು ಹೋಬಳಿಯ ಕೋಡಿದೊಡ್ಡಿ ಗ್ರಾಮದ ಕೃಷ್ಣ ತನ್ನ ಅಂತ್ಯಕ್ರಿಯೆಯಲ್ಲಿ ಸಿದ್ದರಾಮಯ್ಯ ಹಾಗೂ ಯಶ್ ಭಾಗವಹಿಸಬೇಕೆಂದು ಪತ್ರ ಬರೆದಿಟ್ಟು ಆತ್ಮಹ್ಯೆಗೆ ಶರಣಾಗಿದ್ದನು. ಅಭಿಮಾನಿಯ ಈ ಕೋರಿಕೆ ಈಡೇರಿಸಲು ಸಿದ್ದರಾಮಯ್ಯರವರು ಕೋಡಿದೊಡ್ಡಿ ಗ್ರಾಮಕ್ಕೆ ಭೇಟಿ ನೀಡಿದ್ದಾರೆ ಹಾಗೂ ಯಶ್ ಟ್ವೀಟರ್ ಮೂಲಕ ಅಭಿಮಾನಿಯ ಸಾವಿಗೆ ಸಂತಾಪ ಸೂಚಿಸಿದ್ದಾರೆ.
PublicNext
18/02/2021 03:05 pm