ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡ್ರಗ್ ವಿವಾದದಲ್ಲಿ ಮತ್ತೊಬ್ಬ ನಟಿ ಬಂಧನ

ಮುಂಬೈ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯ ಬಂಧನವಾಗಿದೆ. ಕನ್ನಡದ 'ರಿಂಗ್ ಮಾಸ್ಟರ್' ಸಿನಿಮಾದಲ್ಲಿ ನಟಿಸಿದ್ದ ಶ್ವೇತ ಕುಮಾರಿ ಅವರನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ಮುಂಬೈ ಡ್ರಗ್ ಪೆಡ್ಲರ್ ಕರೀಂ ನ ಸಹಚರ ಆಗಿದ್ದ ಚಾಂದ್ ಶೇಖ್ ಎಂಬಾತನನ್ನು ಬಂಧಿಸಿದ್ದ ಎನ್.ಸಿ.ಬಿ ಅಧಿಕಾರಿಗಳು ಆತ ನೀಡಿದ ಮಾಹಿತಿಯ ಆಧಾರದ ಮೇಲೆ ಹೈದರಾಬಾದ್ ನಲ್ಲಿ ನಟಿ ಶ್ವೇತಾ ಕುಮಾರಿ ಅನ್ನು ಬಂಧಿಸಿದ್ದಾರೆ. ಶ್ವೇತ ಕುಮಾರಿ ಅವರು ಕನ್ನಡಕ್ಕಿಂತಲೂ ತೆಲುಗು ಸಿನಿಮಾ ಉದ್ಯಮದಲ್ಲಿ ಹೆಚ್ಚು ಸಂಪರ್ಕ ಹೊಂದಿದ್ದಾರೆ.

ತೆಲುಗು ಸಿನಿಮಾಗಳಲ್ಲಿ ಸಹ ಹೆಚ್ಚಾಗಿ ನಟಿಸಿರುವ ಶ್ವೇತಾ, ಒಂದು ತಮಿಳು ಸಿನಿಮಾದಲ್ಲಿಯೂ ನಟಿಸಿದ್ದಾರೆ.

Edited By : Nagaraj Tulugeri
PublicNext

PublicNext

04/01/2021 09:05 pm

Cinque Terre

127.3 K

Cinque Terre

7