ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

60 ಕೆಜಿ ನಿಂಬೆ ಹಣ್ಣಿನ ಮೂಟೆ ಕದ್ದ ಖದೀಮರು !

ಲಕ್ನೋ: ದುಬಾರಿ ದುನಿಯಾದಲ್ಲಿ ನಿಂಬೆ ಹಣ್ಣು ಈಗ ದುಬಾರಿ ಆಗಿದೆ. ಒಂದು ನಿಂಬೆ ಹಣ್ಣಿಗೆ 13 ರೂಪಾಯಿ ಕೊಡಬೇಕು. ಹೀಗಿರೋವಾಗ ಈ ನಿಂಬೆ ಹಣ್ಣಿನ ಮೇಲೆ ಕಳ್ಳರ ಕಣ್ಣು ಬಿದ್ದು ಬಿಟ್ಟಿದೆ.

ನಿಜ, ಲಕ್ನೋದ ಕಾನ್ಪುರ್‌ನಲ್ಲಿ ಬರೋಬ್ಬ ರಿ 15 ಸಾವಿರ ನಿಂಬೆ ಹಣ್ಣು ಈಗ ದರೋಡೆ ಆಗಿವೆ. ಅದರ ಬೆನ್ನಲ್ಲಿಯೇ ಈಗ ಷಹಜಾನಪುರದ ಮಾರುಕಟ್ಟೆಯಲ್ಲಿ 60 ಕೆ.ಜಿ.ನಿಂಬೆ ಹಣ್ಣಿನ ಚೀಲವನ್ನೇ ಕಳ್ಳರು ಎಗರಸಿಕೊಂಡು ಹೋಗಿದ್ದಾರೆ.

ಇಲ್ಲಿಯ ಮನೋಜ್ ಕಶ್ಯಪ್ ಎಂಬುವವರು ಅಂಗಡಿಗೆ ಬಂದಿದ್ದಾರೆ. ಆದರೆ, ಇವರಿಗೆ ಶಾಕ್ ಆಗಿದೆ. ಅಂಗಡಿಯಲ್ಲಿ ಇತರ ಎಲ್ಲ ತರಕಾರಿ ಇವೆ. ಆದರೆ, ನಿಂಬೆ ಹಣ್ಣಿನ ಮೂಟೇನೆ ಕಳ್ಳರು ಎಗರಿಸಿದ್ದಾರೆ.

Edited By :
PublicNext

PublicNext

16/04/2022 08:06 pm

Cinque Terre

50.34 K

Cinque Terre

0