ಮುಂಬೈ: ಆಸ್ಪತ್ರೆಗೆ ಬಂದ ಮಹಿಳೆಯರಿಗೆ ಔಷಧಿ ಕೊಡುವ ನೆಪದಲ್ಲಿ ಅಂಗಾಂಗ ಮುಟ್ಟಿ ವಿಕೃತಿ ಮೆರೆಯುತ್ತಿದ್ದ ಕೀಚಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಮುಕೇಶ್ ಪ್ರಜಾಪತಿ ಎಂಬಾತನೇ ಮಹಿಳೆಯರ ಅಂಗಾಂಗ ಮುಟ್ಟುತ್ತಿದ್ದ ಆರೋಪಿ. ಸರ್ಜರಿಗಾಗಿ ಆಸ್ಪತ್ರೆಗೆ ಬರುತ್ತಿದ್ದ ಮಹಿಳೆಯರ ಮೇಲೆ ಈತ ಹಲವು ಬಾರಿ ಲೈಂಗಿಕ ಕಿರುಕುಳಕ್ಕೂ ಯತ್ನಿಸಿದ್ದಾನೆ ಎಂಬ ಆರೋಪ ಇದೆ.
ಇತ್ತೀಚೆಗೆ ಈತನಿಂದ ಲೈಂಗಿಕ ಕಿರುಕುಳ ಎದುರಿಸಿದ ಮಹಿಳೆ ನಡೆದ ಸಂಗತಿಯನ್ನು ಮರುದಿನ ತನ್ನ ಸಂಬಂಧಿಕರಿಗೆ ಹೇಳಿದ್ದಾರೆ. ಎಚ್ಚೆತ್ತ ಮಹಿಳೆಯ ಸಂಬಂಧಿಕರು ಕೂಡಲೇ ಆಸ್ಪತ್ರೆಯ ಹಿರಿಯ ಸಿಬ್ಬಂದಿಗೆ ದೂರು ನೀಡಿದ್ದಾರೆ. ಆಗ ಈತನ ಅಸಲಿಯತ್ತು ಗೊತ್ತಾಗಿದೆ.
ನಂತರ ಪೊಲೀಸರಿಗೂ ದೂರು ಕೊಟ್ಟ ಹಿನ್ನಲೆಯಲ್ಲಿ ಈ ಆಸ್ಪತ್ರೆ ಕಾಮಣ್ಣನನ್ನು ಪೊಲೀಸರು ಬಂಧಿಸಿ ನೀರಿಳಿಸಿದ್ದಾರೆ.
PublicNext
23/12/2020 04:21 pm