ಅಡಿಲಾಬಾದ್: ತೆಲಂಗಾಣದ ಆಡಿಲಾಬಾದ್ ಪಟ್ಟಣದಲ್ಲಿ ಕ್ರಿಕೆಟ್ ಆಡುವಾಗ ಎರಡು ಗುಂಪುಗಳ ನಡುವೆ ನಡೆದ ಕ್ಷುಲ್ಲಕ ಜಗಳದ ನಂತರ ಎಐಎಂಐಎಂ ಗೆ ಸೇರಿದ್ದ ಮುಖಂಡನೊಬ್ಬ ಬಂದೂಕಿನಿಂದ ಬಹಿರಂಗವಾಗಿ ಗುಂಡು ಹಾರಿಸಿದ್ದಾನೆ.
ಈ ಘಟನೆಯಲ್ಲಿ ಮೂವರಿಗೆ ಗಾಯಗಳಾಗಿದೆ. ಹುಡುಗರು ಆಟದ ವಿಚಾರದಲ್ಲಿ ಜಗಳವಾಡುತ್ತಿದ್ದ ವೇಳೆ ಅವರ ಪೋಷಕರು ಗಲಾಟೆ ಮಾಡಿಕೊಂಡಿದ್ದರು.
ಈ ವೇಳೆ ಅಡಿಲಾಬಾದ್ ಪುರಸಭೆಯ ಮಾಜಿ ಉಪಾಧ್ಯಕ್ಷ ಫಾರೂಕ್ ಅಹ್ಮದ್ ತಮ್ಮ ಪರವಾನಗಿ ಪಡೆದ ಪಿಸ್ತೂಲ್ ನಿಂದ ಗುಂಡು ಹಾರಿಸಿದ್ದಾರೆ.
ಈ ಗುಂಡೇಟಿನಿಂದ ಇಬ್ಬರಿಗೆ ಗಾಯಗಳಾಗಿದೆ. ಇನ್ನೊಂದು ಬಾರಿ ಫಾರೂಕ್ ಚಾಕುವಿನಿಂದ ಇರಿದ ಪರಿಣಾಮ ಓರ್ವ ವ್ಯಕ್ತಿ ಗಾಯಗೊಂಡಿದ್ದಾನೆ.
"ಸಂತ್ರಸ್ತರು ಅಪಾಯದಿಂದ ಪಾರಾಗಿದ್ದಾರೆ ಮತ್ತು ಆರೋಪಿ ಫಾರೂಕ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಅವರು ಪರವಾನಗಿ ಪಡೆದ ಪಿಸ್ತೂಲ್ ಹೊಂದಿದ್ದಾರೆ.. ಅವರ ಶಸ್ತ್ರಾಸ್ತ್ರ ಪರವಾನಗಿಯನ್ನು ರದ್ದುಗೊಳಿಸುವಂತೆ ನಾವು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದೇವೆ" ಎಂದು ಆಡಿಲಾಬಾದ್ ಎಎಸ್ಪಿ ರಾಜೇಶ್ ಚಂದ್ರ ಹೇಳಿದ್ದಾರೆ.
ಅದೇನೆ ಇರಲಿ ಕ್ಷುಲಕ ಕಾರಣಕ್ಕೆ ಗುಂಡು ಹಾರಿಸುವು ಗುಂಡಾ ರಾಜ್ಯದ ಲಕ್ಷಣ ಎನ್ನುವ ಮಾತುಗಳು ಅಲ್ಲಲ್ಲಿ ಕೇಳಿಬರುತ್ತಿವೆ.
PublicNext
19/12/2020 04:06 pm