ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಣ್ಣಿನಂತೆ ವೇಷಧರಿಸಿ ಬ್ಯೂಟಿ ಪಾರ್ಲರ್‌ಗೆ ಕಾಮುಕ ಎಂಟ್ರಿ- ವಿಧವೆಗೆ ಕಿರುಕುಳ

ಗಾಂಧಿನಗರ: ವ್ಯಕ್ತಿಯೊಬ್ಬ ಮಹಿಳೆಯಂತೆ ವೇಷಧರಿಸಿ 33 ವರ್ಷದ ವಿಧವೆ ನಡೆಸುತ್ತಿದ್ದ ಬ್ಯೂಟಿ ಪಾರ್ಲರ್‌ಗೆ ಎಂಟ್ರಿಕೊಟ್ಟು ಕಿರುಕುಳ ನೀಡಿರುವ ಘಟನೆ ಗುಜರಾತ್‌ನ ಅಹಮದಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ಸಂತ್ರಸ್ತೆಯು ಗಂಡನನ್ನು ಕಳೆದುಕೊಂಡಿದ್ದು, ಅಹಮದಾಬಾದ್ ಜಿಲ್ಲೆಯ ಬೋಪಾಲ್ ಪಟ್ಟಣದಲ್ಲಿ 12 ವರ್ಷದ ಮಗನೊಂದಿಗೆ ವಾಸವಾಗಿದ್ದಾರೆ. ಬ್ಯೂಟಿ ಪಾರ್ಲರ್ ನಡೆಸಿ ಜೀವನವನ್ನು ನಡೆಸುತ್ತಿದ್ದಾರೆ.

ದುಷ್ಕರ್ಮಿಯೊಬ್ಬ ಹೆಣ್ಣಿನಂತೆ ವೇಷಧರಿಸಿ ಭಾನುವಾರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಮಹಿಳೆ ಒಬ್ಬರೇ ಪಾರ್ಲರ್‌ನಲ್ಲಿದ್ದಾಗ ಬಂದಿದ್ದ. ಆದರೆ ಆತನ ಧ್ವನಿ ಕೇಳಿದ ಮಹಿಳೆ ಅನುಮಾನ ವ್ಯಕ್ತಪಡಿಸಿ, ಹೊರಗೆ ಹೋಗಿ ಎಂದು ಹೇಳಿದ್ದಾಳೆ. ಆಗ ಪಾಪಿಯು ಮಹಿಳೆಯ ಕೈ ಹಿಡಿದು ಎಳೆದು ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಇದರಿಂದ ಗಾಬರಿಗೊಂಡ ಮಹಿಳೆ ಅವನನ್ನು ತಳ್ಳಿ ಹಾಕಿ ಹೊರಗೆ ಓಡಿ ಹೋಗಿದ್ದಾಳೆ. ತಕ್ಷಣವೇ ಆರೋಪಿಯು ಸ್ಥಳದಿಂದ ಪರಾರಿಯಾಗಿದ್ದಾನೆ.

ಈ ಸಂಬಂಧ ಸಂತ್ರಸ್ತೆಯು ಬೋಪಾಲ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿಯು ಹೆಣ್ಣಿನಂತೆ ವೇ‍ಷಧರಿಸಿ ಸ್ಕೂಟಿಯಲ್ಲಿ ಪಾರ್ಲರ್‌ಗೆ ಎಂಟ್ರಿ ಕೊಟ್ಟ ದೃಶ್ಯವು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Edited By : Vijay Kumar
PublicNext

PublicNext

17/12/2020 10:49 am

Cinque Terre

52.14 K

Cinque Terre

3

ಸಂಬಂಧಿತ ಸುದ್ದಿ