ಲಕ್ನೋ: ಕಿರಿಯ ಸೊಸೆ ಜೊತೆಗೆ ದೈಹಿಕ ಸಂಬಂಧ ಹೊಂದಿದ್ದ ಪತಿಯನ್ನು ಪತ್ನಿ ಹಾಗೂ ಹಿರಿಯ ಸೊಸೆ ಒಟ್ಟಿಗೆ ಸೇರಿ ಕೊಲೆಗೈದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಭಾದೋಹಿ ಜಿಲ್ಲೆಯ ಗ್ರಾಮವೊಂದರ 55 ವರ್ಷದ ವ್ಯಕ್ತಿ ಕೊಲೆಯಾದ ಪಾಪಿ. ಡಿಸೆಂಬರ್ 12ರಂದು ರಾತ್ರಿ ಕೊಯ್ ರಾನಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕೊಲೆಯಾದ ವ್ಯಕ್ತಿಗೆ ನಾಲ್ವರು ಪುತ್ರರಿದ್ದು, ಅವರೆಲ್ಲರೂ ವಲಸೆ ಕಾರ್ಮಿಕರಾಗಿ ಮುಂಬೈನಲ್ಲಿ ವಾಸವಾಗಿದ್ದರು. ಈ ಪೈಕಿ ಇಬ್ಬರಿಗೆ ಮದುವೆಯಾಗಿದ್ದು, ತಮ್ಮ ಪತ್ನಿಯನ್ನು ಹಳ್ಳಿಯಲ್ಲಿರುವ ಪೋಷಕರ ಜತೆ ಬಿಟ್ಟಿದ್ದರು. ಆದರೆ ಮಾವ ಕಿರಿಯ ಸೊಸೆ ಜತೆ ದೈಹಿಕ ಸಂಬಂಧ ಹೊಂದಿದ್ದ. ಈ ಬಗ್ಗೆ ಪತ್ನಿ ಮತ್ತು ಹಿರಿಯ ಸೊಸೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೇ ಕಿರಿಯ ಸೊಸೆಯನ್ನು ಆಕೆಯ ಪೋಷಕರ ಮನೆಗೆ ಕಳುಹಿಸಿಕೊಟ್ಟಿದ್ದರು.
ಪತ್ನಿ ಹಾಗೂ ಹಿರಿಯ ಸೊಸೆಯ ವಿರುದ್ಧ ವ್ಯಕ್ತಿ ಆಕ್ರೋಶಗೊಂಡಿದ್ದ. ಕೆಲ ದಿನಗಳ ಹಿಂದೆ ಹಿರಿಯ ಸೊಸೆ ಮೇಲೆ ಹಲ್ಲೆ ನಡೆಸಿದ್ದಷ್ಟೇ ಅಲ್ಲದೆ ಕಿರಿಯ ಸೊಸೆಯನ್ನು ಆಕೆಯ ತವರು ಮನೆಯಿಂದ ಕರೆತಂದು ಒಟ್ಟಿಗೆ ವಾಸವಾಗಿದ್ದ. ಇದರಿಂದ ಕೋಪಗೊಂಡ ಆತನ ಪತ್ನಿ ತನ್ನ ಹಿರಿಯ ಸೊಸೆ ಸೇರಿ ಪತಿಯನ್ನು ಥಳಿಸಿದ್ದಾಳೆ. ಬಳಿಕ ಚೂರಿಯಿಂದ ಗಂಡನ ಗಂಟಲನ್ನು ಸೀಳಿ ಹಾಕಿದ್ದಾಳೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
PublicNext
14/12/2020 07:43 pm