ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪತ್ನಿಯ ಕೊಲೆಗೈದು ಹೆಣದೊಂದಿಗೆ ರಾತ್ರಿ ಮಲಗಿದ ಗಂಡ

ಗಾಂಧಿನಗರ(ಗುಜರಾತ್): ಪಾಪಿ ಗಂಡನೊಬ್ಬ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿ ಶವದ ಜೊತೆ ಇಡೀ ರಾತ್ರಿ ಮಲಗಿದ್ದಾನೆ. ಇಂತದ್ದೊಂದು ವಿಕೃತ ಘಟನೆ ಗುಜರಾತಿನ ಗಾಂಧಿನಗರದಲ್ಲಿ ನಡೆದಿದೆ.

ಆರೋಪಿ ಪತಿಯನ್ನು ಕೇದ್ಬಾರಾಮದ ಲಿಖರಾಮ್ ಅಲಿಯಾಸ್ ಲಕ್ಷ್ಮಣ್ ಕೇಶರಾಮ್ ಚೌಧರಿ ಎಂದು ಗುರುತಿಸಲಾಗಿದೆ. ಈತ ಕೆಲ ವರ್ಷಗಳ ಹಿಂದೆ ಏಜೆಂಟ್ ಮೂಲಕ ವಧು ಹುಡುಕಿ ಮದುವೆಯಾಗಿದ್ದ.‌

ಮದುವೆ ನಂತರ ಅನ್ಯೋನ್ಯವಾಗಿದ್ದ ದಂಪತಿ ನಡುವೆ ಕ್ರಮೇಣ ಜಗಳ ತಾರಕಕ್ಕೇರಿದೆ. ಇದರಿಂದ ಬೇಸತ್ತ ಪತಿ ಡಿಸೆಂಬರ್ 4ರಂದು ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಗೋಣಿ ಚೀಲದಲ್ಲಿ ಶವ ತುಂಬಿ ಅದರೊಂದಿಗೆ ರಾತ್ರಿಯಿಡೀ ಮಲಗಿ ಬೆಳಿಗ್ಗೆ ಎದ್ದು ಹೋಗಿದ್ದಾನೆ. ಈಗ ಪಾಪಿ ಪತಿ ಪೊಲೀಸರ ಅತಿಥಿಯಾಗಿದ್ದಾನೆ.

Edited By : Nagaraj Tulugeri
PublicNext

PublicNext

14/12/2020 11:51 am

Cinque Terre

79.41 K

Cinque Terre

0

ಸಂಬಂಧಿತ ಸುದ್ದಿ