ಕೋಲ್ಕತ್ತಾ: ತಾಯಿಯೊಬ್ಬಳು ಮೂಢನಂಬಿಕೆಗೆಯಿಂದಾಗಿ ತನ್ನ 25 ವರ್ಷದ ಮಗನನ್ನು ರುಬ್ಬುವ ಕಲ್ಲಿನಿಂದ ಚಚ್ಚಿ ಕೊಲೆಗೈದು, ಬಳಿಕ ದೇಹವನ್ನು ಮಸಾಲೆ ಹಾಗೂ ತುಪ್ಪದಲ್ಲಿ ಹುರಿದ ಅಮಾನವೀಯ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಬಿಧನ್ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮಹಿಳೆ ಗೀತಾ ತನ್ನ 25 ವರ್ಷದ ಮಗ ಅರ್ಜುನ್‌ನನ್ನು ಕೊಲೆಗೈದಿದ್ದಾಳೆ. ಯುವಕನ ತಂದೆ ಅನಿಲ್ ಮಹೇನ್ಸರಿಯಾ ಮಗ ಕಾಣೆಯಾಗಿರುವ ಕುರಿತು ದೂರು ನೀಡಿದ್ದರು. ತಕ್ಷಣವೇ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಪಾಪಿಯ ವಿಕೃತಿಯನ್ನು ಬಯಲಿಗೆ ಎಳೆದಿದ್ದಾರೆ.
ಆಗಿದ್ದೇನು?:
ಮೂಢನಂಬಿಕೆಗೆ ಹಿನ್ನೆಲೆಯಲ್ಲಿ ಗೀತಾ ತನ್ನ ಹಿರಿಯ ಮಗನನ್ನು ಬಲೆ ಕೊಡಲು ಪ್ಲಾನ್ ಮಾಡಿದ್ದಳು. ಅದರಂತೆ ಎರಡನೇ ಮಗ ವಿದೂರ್ ಸಹಾಯ ಪಡೆದಿದ್ದಳು. ಮೊದಲು ಅಜುರ್ನ್ ಮೇಲೆ ರುಬ್ಬುವ ಕಲ್ಲಿಂದ ಹಲ್ಲೆ ಮಾಡಿದ್ದಾಳೆ. ಬಳಿಕ ಆರೋಪಿಗಳು ಪ್ರಾರ್ಥನಾ ಕೊಠಡಿಯಲ್ಲಿ ಅರ್ಜುನ್‌ನನ್ನು ಜೀವಂತವಾಗಿ ಸುಟ್ಟಿದ್ದಾರೆ. ಈ ವೇಳೆ ಸುಟ್ಟ ದೇಹದ ವಾಸನೆ ಬರುತ್ತಿದೆ ಎಂದು ತುಪ್ಪ, ಕರ್ಪೂರ ಹಾಗೂ ಮಸಾಲೆ ಸುರಿದಿದ್ದಾರೆ. ನಂತರ ಮೃತದೇಹವನ್ನು ಟವೆಲ್‍ನಲ್ಲಿ ಸುತ್ತಿ ಟೆರೇಸ್‌ಗೆ ಎಳೆದೊಯ್ದಿದ್ದಾರೆ ಎಂಬ ಮಾಹಿತಿ ಪ್ರಾಥಮಿಕ ತನಿಖೆಯಲ್ಲಿ ಪೊಲೀಸರಿಗೆ ಲಭಿಸಿದೆ ಎಂದು ವರದಿಯಾಗಿದೆ.
PublicNext
12/12/2020 10:28 pm