ಮಂಡ್ಯ: 61 ವರ್ಷದ ಕಾಮುಕ ವೃದ್ಧನೋರ್ವ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಘಟನೆ ಮಂಡ್ಯದದಲ್ಲಿ ನಡೆದಿದ್ದು, ಅಮಾನವೀಯ ಕೃತ್ಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಂಡ್ಯದ ನಿವಾಸಿ ವೆಂಕಟೇಶ್ (61) ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿ. ಇತನನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ವೆಂಕಟೇಶ್ ಕೋವಿಡ್ ಲಾಕ್‌ಡೌನ್ ವೇಳೆ ತನ್ನ ನೆರೆ ಮನೆಯ 14 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ, ಯಾರಿಗೂ ವಿಷಯ ತಿಳಿಸಿದಂತೆ ಪ್ರಾಣ ಬೆದರಿಕೆ ಹಾಕಿದ್ದ. ಇದರಿಂದ ಬೆದರಿದ ಬಾಲಕಿ ಪೋಷಕರಿಗೆ ಕಾಮುಕನ ಕೃತ್ಯ ತಿಳಿಸಿರಲಿಲ್ಲ. ಆದರೆ ಬಾಲಕಿಯು 3 ತಿಂಗಳ ಗರ್ಭಿಣಿಯಾಗಿದ್ದ ಹಿನ್ನೆಲೆಯಲ್ಲಿ ವಿಷಯ ಮನೆಯವರಿಗೆ ಗೊತ್ತಾಗಿದೆ.
ಗರ್ಭಿಣಿಯಾಗಿರುವ ಬಗ್ಗೆ ಪೋಷಕರು ಪ್ರಶ್ನಿಸಿದಾಗ ಬಾಲಕಿಯು ತನ್ನ ಮೇಲಾದ ಲೈಂಗಿಕ ದೌರ್ಜನ್ಯದ ಕುರಿತು ಹೇಳಿಕೊಂಡಿದ್ದಾಳೆ. ಈ ಸಂಬಂಧ ಅಪ್ರಾಪ್ತೆಯ ತಾಯಿಯು ಡಿಸೆಂಬರ್ 3ರಂದು ರಾತ್ರಿ ಮಂಡ್ಯ ಪಶ್ಚಿಮ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಗುರುವಾರ ಆರೋಪಿಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.
PublicNext
03/12/2020 08:43 pm