ಬೆಂಗಳೂರು: ಗಲಭೆ ಪ್ರಕರಣದ ಆರೋಪಿಯಾಗಿ ಪರಪ್ಪನ ಅಗ್ರಹಾರದಲ್ಲಿದ್ದ ಮಾಜಿ ಮೇಯರ್ ಸಂಪತ್ ರಾಜ್ ಅನಾರೋಗ್ಯದ ನಾಟಕವಾಡಿ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಈ ಡ್ರಾಮಾ ಫೇಲ್ ಆಗಿದೆ. ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ಮತ್ತೆ ಸಂಪತ್ ರಾಜ್ ನನ್ನು ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ಯಲಾಗಿದೆ.
ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಸಂಪತ್ ರಾಜ್ ನನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ ಹಿನ್ನೆಲೆ ನವೆಂಬರ್ 20ರಂದು ಸಂಪತ್ ರಾಜ್ ಪರಪ್ಪರ ಅಗ್ರಹಾರ ಸೇರಿದ್ದರು. ಜೈಲು ಸೇರಿದ ಒಂದೇ ದಿನಕ್ಕೆ ಹೃದಯ ಸಂಬಂಧಿ ಕಾಯಿಲೆ ಹಿನ್ನೆಲೆ ಭಾನುವಾರ ಜೈಲಾಧಿಕಾರಿಗಳು ಸಂಪತ್ ರಾಜ್ ಅವರನ್ನ ಜಯದೇವ ಆಸ್ಪತ್ರೆಗೆ ಕರೆ ತಂದಿದ್ದರು. ವೈದ್ಯರು ಸುಮಾರು ಒಂದೂವರೆ ಗಂಟೆಗಳ ಕಾಲ ಸಂಪತ್ ಆರೋಗ್ಯ ಪರೀಕ್ಷೆ ನಡೆಸಿದರು. ವೈದ್ಯಕೀಯ ವರದಿಯಲ್ಲಿ ಆರೋಗ್ಯದ ಸ್ಥಿತಿ ನಾರ್ಮಲ್ ಆಗಿದೆ ಅಂತ ಬಂದಿದೆ. ಎಲ್ಲವೂ ನಾರ್ಮಲ್ ಇರೋದ್ರಿಂದ ಆಸ್ಪತ್ರೆಗೆ ಅಡ್ಮಿಟ್ ಅವಶ್ಯಕತೆ ಇಲ್ಲ ಎಂದು ವೈದ್ಯರು ಹೇಳಿದರು. ಹೀಗಾಗಿ ಸಂಪತ್ ರಾಜ್ ನನ್ನು ವಾಪಸ್ ಪರಪ್ಪನ ಅಗ್ರಹಾರಕ್ಕೆ ಕರೆದೊಯ್ಯಲಾಗಿದೆ.
PublicNext
23/11/2020 12:24 pm