ರಾಜಸ್ಥಾನ : ವಿಧವೆಯೊಬ್ಬಳು ಮತ್ತೊಂದು ಮದುವೆಯಾಗಲು ನಿರಾಕರಿಸಿದ್ದಕ್ಕಾಗಿ ಅತ್ತೆ-ಮಾವನ ಮನೆಯವರು ಆಕೆಯ ಮೂಗು ಮತ್ತು ನಾಲಗೆಯನ್ನ ಕತ್ತರಿಸಿದ ವಿಚಿತ್ರ ಘಟನೆ ರಾಜಸ್ಥಾನದ ಜೈಸಲ್ಮೇರ್ ನಲ್ಲಿ ನಡೆದಿದೆ.
ಈ ಘಟನೆಗೆ ಸಂಬಂಧಿಸಿದ ಪ್ರಮುಖ ಆರೋಪಿಯನ್ನು ಈಗಾಗಲೇ ಬಂಧಿಸಲಾಗಿದ್ದು ಕೃತ್ಯದಲ್ಲಿ ಭಾಗಿಯಾಗಿರುವ ಇನ್ನುಳಿದವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಸ್ಥಳೀಯ ಪೊಲೀಸ್ ಆಧಿಕಾರಿ ಕಂಠ ಸಿಂಗ್ ತಿಳಿಸಿದ್ದಾರೆ.
ಆರು ವರ್ಷಗಳ ಹಿಂದೆ ಸಂತ್ರಸ್ತೆ ಮದುವೆಯಾಗಿದ್ದು ಕಳೆದ ವರ್ಷ ಈಕೆಯ ಪತಿ ಸಾವನ್ನಪ್ಪಿದ್ದ.
ಇದೀಗ ಸಂಬಂಧಿಯೊಬ್ಬನ ಜೊತೆ ಮರು ಮದುವೆ ಮಾಡಲು ಮಹಿಳೆಯ ಅತ್ತಿಗೆ ಪ್ರಯತ್ನಿಸುತ್ತಿದ್ದಳು ಎಂದು ತಿಳಿದು ಬಂದಿದೆ.
ಅತ್ತಿಗೆಯ ಮದುವೆ ಪ್ರಸ್ತಾಪವನ್ನು ನಿರಾಕರಿಸಿದ ಕಾರಣಕ್ಕಾಗಿ ಮನೆಗೆ ಧಾವಿಸಿ ನನ್ನ ಅಕ್ಕನ ಮೇಲೆ ಹಲ್ಲೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಅಕ್ಕನ ಮೂಗು, ನಾಲಿಗೆ ಕತ್ತರಿಸಲಾಗಿದ್ದು ಮಾತ್ರವಲ್ಲದೆ ಬಲಗೈ ಕೂಡ ಮುರಿದಿದ್ದಾರೆ.
ಈ ನಡುವೆ ಆಕೆಯ ರಕ್ಷಣೆಗೆಂದು ಹೋದ ತನ್ನ ಅಮ್ಮನ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ಸಂತ್ರಸ್ತೆಯ ಸಹೋದರ ಆರೋಪಿಸಿದ್ದಾನೆ.
PublicNext
18/11/2020 10:41 pm