ಬೆಂಗಳೂರು- ಈ ಜಗತ್ತಿನಲ್ಲಿ ಎಂತೆಂಥ ಖದೀಮರಿರ್ತಾರೆ ನೋಡಿ. ಜಡ್ಜ್ ಸಾಹೇಬರ ಮನೆಯಲ್ಲಿ ಮದುವೆ ಇದೆ ಎಂದ ಆಕೆ ಸೀರೆ ತೋರಿಸಿ ಎಂದು ಪೋಸ್ ಕೊಟ್ಟು 120 ಸೀರೆಗಳನ್ನು ಆಯ್ಕೆ ಮಾಡಿದ್ದಾಳೆ. ಇದನ್ನೆಲ್ಲ ಮನೆಯವರಿಗೆ ತೋರಿಸಿ ನಂತರ ಹಣ ಕೊಡ್ತೀನಿ ಎಂದು ಆ ಎಲ್ಲ ಸೀರೆಗಳನ್ನು ಅಲ್ಲಿಂದ ಎತ್ತಿಕೊಂಡು ಹೋಗಿದ್ದಾಳೆ.
ಅಂದ್ ಹಾಗೆ ಈ ಪ್ರಳಯಾಂತಕಿ ಹೆಸರು ಶಶಿಕಲಾ. ಸೀರೆ ಅಂಗಡಿಗೆ ಫೋನ್ ಕರೆ ಮಾಡಿದ್ದ ಆಕೆ ಜಡ್ಜ್ ಮನೆಯಲ್ಲಿ ಮದುವೆ ಇದೆ. ನಾನು ಜಡ್ಜ್ ಮನೆಯಿಂದ ಮಾತಾಡ್ತಿದ್ದೇನೆ. ಒಂದಷ್ಟು ಪಾಟೂರು ಸೀರೆ ಬೇಕಿತ್ತು. ನಮ್ಮ ಮನೆಯಿಂದ ಒಬ್ಬರು ಬರ್ತಾರೆ ಎಂದು ಹೇಳಿ ಕಾಲ್ ಕಟ್ ಮಾಡಿದ್ದಾಳೆ.
ನಂತರ ಅಂಗಡಿಗೆ ಹೋದ ವಂಚಕಿ ಶಶಿಕಲಾ ಸೀರೆಗಳನ್ನು ಸೆಲೆಕ್ಟ್ ಮಾಡಿಕೊಂಡು ಸಂಪಿಗೆ ಹಳ್ಳಿಯಲ್ಲಿರುವ ಅಪಾರ್ಟ್ ಮೆಂಟ್ ಗೆ ತರಿಸಿಕೊಂಡಿದ್ದಳು. ಆದರೆ ಹಣ ಪಾವತಿಸಿರಲಿಲ್ಲ. ಈ ವಂಚನೆ ಅರಿವಿಗೆ ಬರುತ್ತಲೇ ಪೊಲೀಸರಿಗೆ ಅಂಗಡಿಯವರು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ತಕ್ಷಣ ಫೀಲ್ಡಿಗಿಳಿದು ಕದ್ದ ಮಾಲಿನ ಸಮೇತ ಶಶಿಕಲಾಳನ್ನು ಬಂಧಿಸಿದ್ದಾರೆ .
PublicNext
16/11/2020 10:12 pm