ತುಮಕೂರು: ಸೆಲ್ಫಿ ಕ್ಲಿಕ್ಕಿಸಲು ಹೋದ ಸಹೋದರಿಯರು ನೀರು ಪಾಲಾದ ಘಟನೆ ಶಿರಾ ತಾಲೂಕು ಕಳ್ಳಂಬೆಳ್ಳ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲೀಗ ಶೋಕ ಆವರಿಸಿದೆ.
ಶಿಲ್ಪಾ(18) ಮತ್ತು ಸುಶ್ಮಿತಾ(16) ಮೃತ ದುರ್ದೈವಿಗಳು. ಶಿಲ್ಪಾಳ ಮದುವೆ ನಿಶ್ಚಿತಾರ್ಥಕ್ಕೆ ಭಾನುವಾರ ಮನೆಯಲ್ಲಿ ತಯಾರಿ ಜೋರಾಗಿಯೇ ನಡೆದಿತ್ತು. ಸಂಬಂಧಿಕರು, ಸ್ನೇಹಿತರೂ ಬಂದಿದ್ದರು. ಶಿಲ್ಪಾ ಕೂಡ ರೆಡಿಯಾಗಿದ್ದಳು.
ಶಿಲ್ಪಾ ಮತ್ತು ಆಕೆ ತಂಗಿ ಸುಶ್ಮಿತಾ ಇಂದು ಬೆಳಗ್ಗೆ 9:30ರ ಸುಮಾರಿಗೆ ಮನೆಗೆ ಬಂದ ಸ್ನೇಹಿತರೊಂದಿಗೆ ಊರನ್ನು ಒಂದು ಸುತ್ತು ಹಾಕಲೆಂದು ಕರೆದೊಯ್ದಿದ್ದರು. ಈ ವೇಳೆ ಕಳ್ಳಂಬೆಳ್ಳ ಕೆರೆ ದಡದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಅವಘಡ ಸಂಭವಿಸಿದೆ. ಪರಿಣಾಮ ಸಹೋದರಿಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
08/11/2020 05:58 pm