ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರೆಝಿಲ್: ಈಜುಕೊಳದ ಕೊಳವೆಯಲ್ಲಿ ತಲೆಗೂದಲು ಸಿಲುಕಿ ಬಾಲಕಿ ಸಾವು

ಬ್ರೆಝಿಲ್: ಅಜ್ಜಿಯ ಬರ್ತ್‌ಡೇ ಪಾರ್ಟಿಯಲ್ಲಿ ಪಾಲ್ಗೊಂಡ ಬಾಲಕಿ ಅದೇ ಖುಷಿಯಲ್ಲಿ ಈಜುವಾಗ ಕೂದಲು ಸಿಲುಕಿ ಮೃತಪಟ್ಟಿದ್ದಾಳೆ.

ಪಶ್ಚಿಮ ಬ್ರೆಝಿಲ್‌ನಲ್ಲಿ ಈ ಘಟನೆ ನಡೆದಿದ್ದು, ಮರಿಯಾನಾ ಡಾಸ್ ಅಂಜೋಸ್ ಫರಿಯಾ ಎಂಬ 9 ವರ್ಷದ ಬಾಲಕಿ ಮೃತಪಟ್ಟ ದುರ್ದೈವಿಯಾಗಿದ್ದಾಳೆ. ಫೆಬ್ರವರಿ 12ರಂದು ಈ ಘಟನೆ ನಡೆದಿದ್ದು ಈಜುಕೊಳದಲ್ಲಿದ್ದ ಇತರ ಮಕ್ಕಳು ಬಾಲಕಿಯ ತಂದೆಯನ್ನು ಕೂಗಿದಾಗ ರಕ್ಷಣೆಗೆ ಧಾವಿಸಿದ ತಂದೆ ಕೊಳವೆಯಲ್ಲಿ ಸಿಲುಕಿದ್ದ ಕೂದಲು ಕತ್ತರಿಸಿ ಮಗಳನ್ನು ಹೊರ ತೆಗೆದಿದ್ದಾರೆ. ಅಷ್ಟೊತ್ತಿಗಾಗಲೇ ಮಗಳ ಉಸಿರಾಟ ನಿಂತಿತ್ತು ಎನ್ನಲಾಗಿದೆ. ನಂತರ ಬಾಲಕಿ ಮೃತಪಟ್ಟಿರುವುದು ಖಚಿತವಾಗಿದೆ.

Edited By : Nagaraj Tulugeri
PublicNext

PublicNext

21/02/2022 04:33 pm

Cinque Terre

52.76 K

Cinque Terre

0

ಸಂಬಂಧಿತ ಸುದ್ದಿ