ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಲುವೆಗೆ ಉರುಳಿದ ಕಾರು: ದಂಪತಿ, ಮಗು ಸಾವು, 2 ತಿಂಗಳ ಕಂದಮ್ಮ ನಾಪತ್ತೆ

ಶ್ರೀನಗರ: ಜಮ್ಮುವಿನ ಹೊರವಲಯದಲ್ಲಿ ಕಾರು ಕಾಲುವೆಗೆ ಉರುಳಿ ಬಿದ್ದ ಪರಿಣಾಮ ದಂಪತಿ ಹಾಗೂ ಓರ್ವ ಮಗು ಸಾವನ್ನಪ್ಪಿದ ದುರ್ಘಟನೆ ಶನಿವಾರ ಮುಂಜಾನೆ ನಡೆದಿದೆ. ಈ ದುರ್ಘಟನೆಯಲ್ಲಿ 2 ತಿಂಗಳ ಮಗು ನಾಪತ್ತೆಯಾಗಿದೆ.

ಕೇವಲ್ ಕ್ರಿಶನ್ (60), ಅವರ ಪತ್ನಿ ಸುರ್ಜೀತ್ ಕುಮಾರಿ (52) ಮತ್ತು ಎರಡು ವರ್ಷದ ಮನ್ಶಿ ಮೃತ ದುರ್ದೈವಿಗಳು. ಮೀರಾನ್ ಸಾಹಿಬ್ ಪ್ರದೇಶದ ಮರಾಲಿಯನ್​ನಲ್ಲಿ ಇಂದು ಮುಂಜಾನೆ ಅಪಘಾತ ಸಂಭವಿಸಿದೆ. ಪ್ರಯಾಣಿಕರು ಅರ್ನಿಯಾದ ಬಹದ್ದೂರ್‌ಪುರ ಗ್ರಾಮಕ್ಕೆ ತೆರಳುತ್ತಿದ್ದಾಗ ಕಾರು ಸ್ಕಿಡ್ ಆಗಿ ಕಾಲುವೆಗೆ ಬಿದ್ದಿದೆ.

ಕುಮಾರ್, ಅವರ ಪತ್ನಿ ಕಾಂಚನಾ, ಮೆನು ಕುಮಾರಿ ಮತ್ತು ಮಗ ಸುಶಾಂತ್ ಎಂಬ ನಾಲ್ವರನ್ನು ರಕ್ಷಿಸಲಾಗಿದೆ. ಆದರೆ ಎರಡು ತಿಂಗಳ ಪರಾಂಶಿಗಾಗಿ ಶೋಧಕಾರ್ಯ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Edited By : Vijay Kumar
PublicNext

PublicNext

11/09/2021 06:23 pm

Cinque Terre

54.61 K

Cinque Terre

0

ಸಂಬಂಧಿತ ಸುದ್ದಿ