ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

100 ಬಾರಿ ಕ್ರೈಂ ಶೋ ನೋಡಿ ತಂದೆಯನ್ನೇ ಕೊಲೆಗೈದ ಬಾಲಕ

ಲಕ್ನೋ: ಉತ್ತರ ಪ್ರದೇಶದ ಮಥುರಾದ ಬಾಲಕನೊಬ್ಬ 100 ಬಾರಿ ಕ್ರೈಂ ಶೋ ನೋಡಿ ತಂದೆಯನ್ನೇ ಕೊಲೆಗೈದ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಇದೇ ಮೇ ತಿಂಗಳಿನಲ್ಲಿ ಅಪ್ರಾಪ್ತ ಬಾಲಕ ತಂದೆಯನ್ನು ಕೊಂದು, ಮೃತದೇಹವನ್ನು ಯಾರಿಗೂ ಕಾಣದ ರೀತಿಯಲ್ಲಿ ಎಸೆದಿದ್ದ. ಅಷ್ಟೇ ಅಲ್ಲದೆ ಅಪರಾಧ ಕಾರ್ಯಕ್ರಮದಲ್ಲಿ ಪ್ರಸಾರವಾಗಿದ್ದ ದೃಶ್ಯಾವಳಿಯಿಂದ ಸ್ಫೂರ್ತಿಗೊಂಡು ಸಾಕ್ಷ್ಯ ನಾಶ ಮಾಡಿದ್ದಾನೆ ಎಂದು ಮಥುರಾದ ಪೊಲೀಸ್‌ ವರಿಷ್ಠಾಧಿಕಾರಿ ಎಸ್‌.ಮಿಶ್ರಾ ಹೇಳಿದ್ದಾರೆ.

ಆಗಿದ್ದೇನು?: ಮನೋಜ್‌ ಮಿಶ್ರಾ ಎಂಬಾತ ತನ್ನ ಪುತ್ರನಿಗೆ ಮತ್ತು ಪುತ್ರಿಗೆ ಥಳಿಸಿದ್ದ. ಇದರಿಂದ ಕೋಪಗೊಂಡ ಬಾಲಕ ತನ್ನ ತಂದೆ ಮೇಲೆ ರಾಡ್‌ನಿಂದ ಹಲ್ಲೆ ಮಾಡಿದ್ದ. ತಲೆಗೆ ಹೊಡೆತ ಬಿದ್ದಿದ್ದರಿಂದ ಪ್ರಜ್ಞೆ ತಪ್ಪಿದ್ದ ತಂದೆಯ ಕೊರಳಿಗೆ ಬಟ್ಟೆ ಸುತ್ತಿ ಕೊಲೆಗೈದಿದ್ದ. ಬಳಿಕ ತಾಯಿ ಸಂಗೀತಾ ಮಿಶ್ರಾ ಸಹಾಯದಿಂದ ಸ್ಕೂಟಿಯಲ್ಲಿ ಖಾಲಿ ಸ್ಥಳಕ್ಕೆ ಮೃತದೇಹ ಕೊಂಡೊಯ್ದು ಸುಟ್ಟು ಹಾಕಿದ್ದ. ಕೊಲೆಯನ್ನು ಆತ್ಮಹತ್ಯೆ ಎಂದು ಪುಷ್ಟೀಕರಿಸುವ ಸಲುವಾಗಿ ಮೃತ ವ್ಯಕ್ತಿಯ ಕನ್ನಡಕ, ಚಪ್ಪಲಿ ಮತ್ತು ಇತರ ವಸ್ತುಗಳನ್ನು ಸ್ಥಳದಲ್ಲಿ ಎಸೆಯಲಾಗಿತ್ತು. ಆದರೆ ಮತ್ತೊಂದು ಪ್ರಕರಣದ ತನಿಖೆ ನಡೆಸಿದಾಗ ಕೃತ್ಯ ಬಯಲಾಗಿದೆ.

Edited By : Vijay Kumar
PublicNext

PublicNext

31/10/2020 11:50 am

Cinque Terre

60.86 K

Cinque Terre

2

ಸಂಬಂಧಿತ ಸುದ್ದಿ