ವಿಜಯವಾಡ: ಆಂಧ್ರ ಪ್ರದೇಶದ ವಿಜಯವಾಡದಲ್ಲಿ ನಡೆದಿದ್ದ ಎಂಜಿನಿಯರ್ ವಿದ್ಯಾರ್ಥಿನಿಯ ಕೊಲೆ ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ.
ವಿಜಯವಾಡದ ಕ್ರಿಸ್ತುರಾಜ್ಪುರಂನಲ್ಲಿ ಅಕ್ಟೋಬರ್ 15ರಂದು ಈ ಘಟನೆ ನಡೆದಿತ್ತು. ವಿದ್ಯಾರ್ಥಿನಿ ದಿವ್ಯಾ ತೇಜಸ್ವಿನಿಗೆ ಚಾಕು ಇರಿದು ನಾಗೇಂದ್ರ ಬಾಬು ಅಲಿಯಾಸ್ ಸ್ವಾಮಿ ಬರ್ಬರವಾಗಿ ಕೊಲೆಗೈದಿದ್ದ. ಅಷ್ಟೇ ಅಲ್ಲದೆ ತಾನು ಸಹ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ತನಿಖೆ ಆರಂಭಿಸಿರುವ ಪೊಲೀಸರಿಗೆ ಫೋಟೋ ಒಂದು ಸಿಕ್ಕಿದೆ.
ಆರೋಪಿ ನಾಗೇಂದ್ರ ಪಾಲಕರ ಪ್ರಕಾರ ಇಬ್ಬರು ಪ್ರೇಮಿಗಳಾಗಿದ್ದು, ಕೆಲವು ತಿಂಗಳ ಹಿಂದೆ ರಹಸ್ಯವಾಗಿ ಮದುವೆಯು ಆಗಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ. ಆದರೆ ಈ ವಿಚಾರವನ್ನು ದಿವ್ಯಾ ಕುಟುಂಬ ಅಲ್ಲಗೆಳೆದಿದ್ದಾರೆ. ಈ ಮಧ್ಯೆ ನಡುವೆ ನಾಗೇಂದ್ರ ಸಹೋದರ ನಾಗರಾಜು, ದಿವ್ಯಾ ಮತ್ತು ನಾಗೇಂದ್ರ ಒಟ್ಟಿಗೆ ಇರುವ ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ. ಫೋಟೋದಲ್ಲಿ ಇಬ್ಬರು ಮದುವೆ ಆಗಿರುವಂತಿದೆ. ದಿವ್ಯಾಳ ಕುತ್ತಿಗೆಯಲ್ಲಿ ಮಾಂಗಲ್ಯವು ಇದ್ದಂತಿದೆ. ಆಕೆಯ ಪಾಲಕರಿಗೂ ಸಹ ಮದುವೆ ಬಗ್ಗೆ ತಿಳಿದಿದೆ. ಆದರೆ ಇಬ್ಬರು ಒಟ್ಟಿಗೆ ಬಾಳಲು ಅವರ ಕುಟುಂಬ ಬಿಡಲಿಲ್ಲ ಎಂದು ನಾಗರಾಜು ಆರೋಪಿಸಿದ್ದಾರೆ.
PublicNext
16/10/2020 04:18 pm