ದಾವಣಗೆರೆ: ತಂದೆಯೊಬ್ಬ ಮೂರು ವರ್ಷದ ಮಗಳನ್ನು ಕೊಲೆಗೈದು ಸಮಾಧಿ ಮಾಡಿರುವ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಗುತ್ತಿದುರ್ಗದಲ್ಲಿ ನಡೆದಿದೆ.
ಸಿರಿಶಾ ಕೊಲೆಯಾದ ಮಗು. ನಿಂಗಪ್ಪ ಮಗಳನ್ನ ಕೊಲೆಗೈದ ಆರೋಪಿ. ಮೊದಲ ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳಿದ್ದರೂ ನಿಂಗಪ್ಪ ಎರಡನೇ ಮದುವೆಯಾಗಿದ್ದ. ಎರಡನೇ ಪತ್ನಿ ಶಶಿಕಲಾ ಜೊತೆಯಲ್ಲಿಯೇ ನಿಂಗಪ್ಪ ವಾಸವಾಗಿದ್ದ ಎನ್ನಲಾಗಿದೆ. ಒಂದು ತಿಂಗಳ ಹಿಂದೆ ಮಗಳನ್ನ ಕರೆದುಕೊಂಡು ಹೋಗಿದ್ದ ನಿಂಗಪ್ಪ ಆಕೆಯನ್ನ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಶಶಿಕಲಾ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ಗುತ್ತಿದುರ್ಗದ ಗ್ರಾಮಸ್ಥರು ಮಗು ಸಮಾಧಿ ಮಾಡಿರುವ ಸ್ಥಳವನ್ನು ಪತ್ತೆ ಹಚ್ಚಿದ್ದಾರೆ. ದಾವಣಗೆರೆ ಮತ್ತು ಚಿತ್ರದುರ್ಗ ಪೊಲೀಸರು ಇಂದು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
PublicNext
13/10/2020 09:49 am