ಎಸ್.ಎಸ್. ರಾಜಮೌಳಿ ನಿರ್ದೇಶನದ 'ಬಾಹುಬಲಿ' ಸಿನಿಮಾದಲ್ಲಿ ಬಲ್ಲಾಳದೇವ ಆಗಿ ಅಬ್ಬರಿಸಿದ್ದ ತೆಲಗು ನಟ ರಾಣಾ ದಗ್ಗುಬಾಟಿ ಕಚೇರಿಯಲ್ಲಿ ಪವರ್ ಸ್ಟಾರ್ ಪುತ್ಥಳಿ ಇದೆ.
ಹೌದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಹಲೋಕ ತ್ಯಜಿಸಿ ಒಂದು ವರ್ಷ ಸಮೀಪಿಸುತ್ತಿದೆ. ಆದ್ರೆ ಅಭಿಮಾನಿಗಳ ಮನದ ನೋವು ಕಡಿಮೆ ಆಗಿಲ್ಲ. ಪ್ರತಿದಿನ ಅಪ್ಪುನನ್ನು ಒಂದಿಲ್ಲೊಂದು ರೀತಿಯಲ್ಲಿ ಜನ ನೆನೆಯುತ್ತಲೇ ಇದ್ದು ಅವರಿಗೆ ಒಂದಿಲ್ಲೊಂದು ರೀತಿಯಲ್ಲಿ ನಮನ ಸಲ್ಲಿಸುತ್ತಿದ್ದಾರೆ.
ಇನ್ನು ಅಪ್ಪು ಪರಭಾಷೆಯ ಅನೇಕ ಸೆಲೆಬ್ರಿಟಿಗಳೊಂದಿಗೆ ಉತ್ತಮ ಸ್ನೇಹ ಸಂಬಂಧ ಹೊಂದಿದ್ದರು. 'ಕರ್ನಾಟಕ ರತ್ನ'ನ ವ್ಯಕ್ತಿಕ್ತಕ್ಕೆ ಸ್ಟಾರ್ ನಟರೂ ಕೂಡ ಮನಸೋತಿದ್ದರು ಎಂಬುದಕ್ಕೆ ಇದೇ ಸಾಕ್ಷಿ.ತಮ್ಮ ಕಚೇರಿಯಲ್ಲಿ ಪುನೀತ್ ಪುತ್ಥಳಿ ಇದೆ ಎಂಬುದನ್ನು ಸ್ವತಃ ನಟ ರಾಣಾ ದಗ್ಗುಬಾಟಿ ಹೇಳಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಫೋಟೋ ಹಂಚಿಕೊಂಡಿದ್ದಾರೆ. ‘ತುಂಬ ಸುಂದರವಾದ ಸ್ಮರಣಿಕೆ ಇಂದು ನನ್ನ ಕಚೇರಿಗೆ ಬಂತು. ಮಿಸ್ ಯೂ ಮೈ ಫ್ರೆಂಡ್ ಪುನೀತ್ ರಾಜ್ಕುಮಾರ್’ ಎಂದು ರಾಣಾ ದಗ್ಗುಬಾಟಿ ಪೋಸ್ಟ್ ಮಾಡಿದ್ದಾರೆ.
PublicNext
04/10/2022 06:35 pm