ಬಾಲಿವುಡ್ ಸ್ಟಾರ್ ನಟಿ ಕರೀನಾ ಕಪೂರ್ ಖಾನ್ ಅಭಿಮಾನಿಯೋರ್ವನಿಂದ ಕಿರಿಕಿರಿ ಅನುಭವಿಸಿದ್ದಾರೆ.ಹೌದು ಹೇಳಿ ಕೇಳಿ ಕರೀನಾಗೆ ಅಭಿಮಾನಿಗಳು ಹೆಚ್ಚು. ಇವರನ್ನು ಕಂಡೊಡನೆ ಒಂದು ಸೆಲ್ಫಿ ತೆಗೆದುಕೊಳ್ಳಲು ಹಾತೊರೆಯುತ್ತಾರೆ. ಆದರೆ, ಮುಂಬೈ ವಿಮಾನ ನಿಲ್ದಾಣದಲ್ಲಿ ಅಭಿಮಾನಿ ತೋರಿದ ವರ್ತನೆಗೆ ಕರೀನಾ ಬೆಚ್ಚಿಬಿದ್ದಿದ್ದಾರೆ.
ಮುಂಬೈ ವಿಮಾನ ನಿಲ್ದಾಣದಲ್ಲಿ ನಟಿ ಜೊತೆಗೆ ಸೆಲ್ಫಿ ತೆಗೆಸಿಕೊಳ್ಳಲು ಬಂದ ಅಭಿಮಾನಿಯೊಬ್ಬ ನೇರವಾಗಿ ಹೆಗಲ ಮೇಲೆ ಕೈ ಹಾಕಲು ಮುಂದಾಗಿದ್ದಾನೆ.ಇದರಿಂದ ಕರೀನಾ ಕಪೂರ್ ಇರುಸುಮುರುಸಿಗೆ ಒಳಗಾಗಿದ್ದಾರೆ. ಅಷ್ಟರಲ್ಲಿಯೇ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಕರೀನಾ ಕಪೂರ್ ಬಾಡಿಗಾರ್ಡ್ ಆತನ ಕೈಯನ್ನು ದೂರ ತಳ್ಳಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
PublicNext
03/10/2022 07:57 pm