ಬೆಂಗಳೂರು: ಸ್ಯಾಂಡಲ್‌ವುಡ್ ಕ್ವೀನ್ ನಟಿ ರಮ್ಯಾ ಅವರು ಸಿಹಿಸುದ್ದಿ ಕೊಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.
ಈ ಬಗ್ಗೆ ನಟಿ ರಮ್ಯಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ, 'ನಾಳೆ (ಆಗಸ್ಟ್ 31) ಬೆಳಗ್ಗೆ 11.15ಕ್ಕೆ ನಿಮಗೆಲ್ಲ ನಾನು ಸಿಹಿ ಸುದ್ದಿ ನೀಡುತ್ತೇನೆ. ಇದು ಅಧಿಕೃತ' ಎಂದು ಬರೆದುಕೊಂಡಿದ್ದಾರೆ.
ಈ ವಿಚಾರದ ಕುರಿತು ಅಭಿಮಾನಿಗಳ ತಲೆಯಲ್ಲಿ ಹಲವು ಪ್ರಶ್ನೆ ಮೂಡಿದೆ. ಮದುವೆ ಅಥವಾ ಸಿನಿಮಾ ವಿಚಾರಕ್ಕೆ ರಮ್ಯಾ ಅವರು ಸಿಹಿಸುದ್ದಿ ಕೊಡಲಿದ್ದಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ರಮ್ಯಾ ಆದಷ್ಟು ಬೇಗ ತೆರೆ ಮೇಲೆ ಕಾಣಿಸಿಕೊಳ್ಳಲಿ ಎಂದು ಸಹಸ್ರಾರು ಮಂದಿ ಕಾಯುತ್ತಿದ್ದಾರೆ. ರಮ್ಯಾ ಏನು ಸಿಹಿಸುದ್ದಿ ನೀಡಲಿದ್ದಾರೆ ಎಂದು ಕಾದು ನೋಡಬೇಕಿದೆ.
ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳ ಕಾಲ ಬಹುಬೇಡಿಕೆಯ ನಟಿಯಾಗಿ ಆಳ್ವಿಕೆ ಮಾಡಿದವರು ರಮ್ಯಾ. ನಂತರ ಅವರು ರಾಜಕೀಯಕ್ಕೆ ತೆರಳಿದರು. ಆ ಬಳಿಕ ನಟನೆಯಿಂದ ಸಂಪೂರ್ಣ ಬ್ರೇಕ್ ಪಡೆದುಕೊಂಡರು. ಆದಷ್ಟು ಬೇಗ ಅವರು ಕಮ್ಬ್ಯಾಕ್ ಮಾಡಬೇಕು ಎಂಬುದು ಅಭಿಮಾನಿಗಳ ಬಯಕೆ. ಅದು ಈಡೇರುವ ಕಾಲ ಈಗ ಕೂಡಿಬಂದಿದೆ ಎಂದು ಎಲ್ಲರೂ ಊಹಿಸುತ್ತಿದ್ದಾರೆ. ರಮ್ಯಾ ನೀಡಲಿರುವ ಆ ಸಿಹಿ ಸುದ್ದಿ ಏನು ಎಂಬುದನ್ನು ತಿಳಿಯಲು ಫ್ಯಾನ್ಸ್ ಕಾಯುತ್ತಿದ್ದಾರೆ.
PublicNext
30/08/2022 01:55 pm