ನಟ ವಿಜಯ್ ದೇವರಕೊಂಡ ಅವರ ಅಭಿನಯದ ಲೈಗರ್ ಚಿತ್ರವು ನಾಳೆ (ಆಗಸ್ಟ್ 25)ರಂದು ತೆರೆ ಮೇಲೆ ಅಬ್ಬರಿಸಲು ಸಿದ್ಧವಾಗಿದೆ. ಸಿನಿಮಾ ಪ್ರಚಾರಕ್ಕಾಗಿ ಪೂರಿ ಜಗನ್ನಾಥ್ ಅವರು ವಿಶೇಷ ಗಮನಹರಿಸಿದ್ದಾರೆ.
ಸದ್ಯ ಇನ್‌ಸ್ಟಾಗ್ರಾಂ ಮತ್ತು ಯೂಟ್ಯೂಬ್‌ನ ಕಂಟೆಂಟ್ ಕ್ರಿಯೇಟರ್ ನಿಹಾರಿಕಾ ಎನ್.ಎಂ ಅವರು ನಟ ವಿಜಯ್ ದೇವರಕೊಂಡ ಜೊತೆಗೆ ಕರಾಟೆ ಮತ್ತು ಕಿಕ್ ಬಾಕ್ಸಿಂಗ್ ಮಾಡಿದ್ದಾರೆ. 'ನೀನಾ- ನಾನಾ ಎಂದು ಹೇಳುತ್ತರೆ. ಬನ್ನಿ.. ನೋಡೋಣ' ಎಂದು ಇಬ್ಬರೂ ಪರಸ್ಪರ ಫೈಟ್ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ. ಫೈಟಿಂಗ್ ಮಧ್ಯೆ ವಿಜಯ್ ದೇವರಕೊಂಡ ಲೈಗರ್ ಸಿನಿಮಾದಂತೆ ಡೈಲಾಗ್‌ಗಳನ್ನು ಹೇಳುತ್ತಿದ್ದು, ನಿಹಾರಿಕಾ ಈ ವಿಡಿಯೋದಲ್ಲಿ ತೊದಲುತ್ತಿದ್ದಾರೆ. ಈ ಮೂಲಕ ವಿಜಯ್, ನಿಹಾರಿಕಾ ಜೋಡಿಯು ಲೈಗರ್ ಚಿತ್ರದ ಪ್ರಮೋಷನ್ ಮಾಡಿದೆ.
PublicNext
24/08/2022 08:45 pm