ಸದ್ಯ ಭಾರತದ ಚಿತ್ರರಂಗದಲ್ಲಿ ದಕ್ಷಿಣ ಭಾರತ ಟಾಪ್ ನಲ್ಲಿದೆ. ಇತ್ತೀಚಿನ ದಿನಗಳಲ್ಲಂತೂ ಕನ್ನಡ, ತೆಲಗು, ತಮಿಳು ಸೇರಿದಂತೆ ಎಲ್ಲಾ ಚಿತ್ರರಂಗದಿಂದ ಅತ್ಯುತ್ತಮ ಸಿನಿಮಾಗಳು ಮೂಡಿಬರುತ್ತಿದ್ದು. ದಕ್ಷಿಣ ಭಾರತದಲ್ಲೇ ಈಗ ಭಾರಿ ಹವ ಹುಟ್ಟುಹಾಕಿವೆ. ದೊಡ್ಡ ಬಜೆಟ್ ಸಿನಿಮಾಗಳು ವಿಶ್ವದಾದ್ಯಂತ ಧೂಳೆಬ್ಬಿಸುತ್ತಿವೆ. ಕನ್ನಡದ ಕೆಜಿಎಫ್ -2, ಚಾರ್ಲಿ- 777, ಆರ್,ಆರ್,ಆರ್ ವಿಕ್ರಮ್ ಸೇರಿದಂತೆ ಅನೇಕ ಸಿನಿಮಾಗಳು ಫ್ಯಾನ್ ಇಂಡಿಯಾ ಸಿನಿಮಾಗಳಾಗಿ ಹೊರಹೊಮ್ಮಿವೆ.
ಇನ್ನು ಭಾರತ ಟಾಪ್ ಹೀರೋಗಳ ಪಟ್ಟಿ ಪ್ರಕಟವಾಗಿದ್ದು 2022 ಜುಲೈ ಅವಧಿಯ ಟಾಪ್ ಲಿಸ್ಟ್ ಬಿಡುಗಡೆಯಾಗಿದ್ದು, ಈ ಪಟ್ಟಿಯಲ್ಲಿ ದಳಪತಿ ವಿಜಯ್ ಮೊದಲ ಸ್ಥಾನದಲ್ಲಿದ್ದಾರೆ. ಅವರ ನಟನೆಯ 'ಬೀಸ್ಟ್' ದೊಡ್ಡ ಸೌಂಡ್ ಮಾಡಿಲ್ಲವಾದರೂ ಇಮೇಜ್ ಗೇನು ಕಡಿಮೆ ಮಾಡಲಿಲ್ಲ. ಸೂಲುಗಳ ನಡುವೆಯೇ ಪ್ರಭಾಸ್ ಎರಡನೇ ಸ್ಥಾನದಲ್ಲಿದ್ದರೆ, ಜೂ.ಎನ್ ಟಿಆರ್ ಆರ್,ಆರ್, ಆರ್ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ. ಇನ್ನು ಅಲ್ಲು ಅರ್ಜುನ್ ಅವರ ಪುಷ್ಪ ಬಿಗ್ ಹಿಟ್ ಕಾಣುವುದರ ಮೂಲಕ ನಾಲ್ಕನೆ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.
ಇನ್ನು ಕನ್ನಡದ ರಾಕಿಭಾಯ್ ಅವರು ಕೆಜಿಎಫ್ -2 ಮೂಲಕ ಇಡೀ ಜಗತ್ತೆ ಕನ್ನಡ ಸಿನಿಮಾದತ್ತ ನೋಡುವಂತೆ ಮಾಡುವ ಮೂಲಕ ವಿಶ್ವದ ಬಾಕ್ಸ್ ಆಫಿಸ್ ನಲ್ಲಿ ಧೂಳೆಬ್ಬಿಸಿದ್ದಾರೆ. ಈ ಮೂಲಕ ದಕ್ಷಿಣ ಭಾರತದ ಟಾಪ್ ಹತ್ತರಲ್ಲಿ 5ನೇ ಸ್ಥಾನವನ್ನು ಯಶ್ ಅಲಂಕರಿಸಿದ್ದಾರೆ. ಈ ಸ್ಥಾನವನ್ನು ಅಲಂಕರಿಸಿದ ಕನ್ನಡದ ಏಕೈಕ ನಟ ಯಶ್ ಆಗಿದ್ದಾರೆ.
ಇನ್ನುಳಿದಂತೆ, ರಾಮ್ ಚರಣ್-6, ಅಕ್ಷಯ್ ಕುಮಾರ್-7, ಮಹೇಶ್ ಬಾಬು -8, ಸೂರ್ಯ-9, ಅಜಿತ್ ಕುಮಾರ್- 10 ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
PublicNext
23/08/2022 05:34 pm