ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊದಲ ಮಗುವಿನ ನಿರೀಕ್ಷೆಯಲ್ಲಿ ಬಿಪಾಶಾ ಬಸು : ಬೇಬಿ ಬಂಪ್ ಫೋಟೋಶೂಟ್

ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ತಮ್ಮ ಮದುವೆಯಾದ ಆರು ವರ್ಷಗಳ ನಂತರ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.2016ರಲ್ಲಿ ಬಿಪಾಶಾ ಬಸು ಹಾಗೂ ಕರಣ್ ಸಿಂಗ್ ಗ್ರೋವರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಏಪ್ರಿಲ್ 30, 2016ರಂದು ಕುಟುಂಬಸ್ಥರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ವಿವಾಹ ಮಹೋತ್ಸವ ಬಂಗಾಳಿ ಸಂಪ್ರದಾಯಂತೆ ಶಾಸ್ತ್ರೋಕ್ತವಾಗಿ ನಡೆದಿತ್ತು. ಪ್ರೀತಿಸಿ ಮದುವೆಯಾದ ಈ ಜೋಡಿ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಕರಣ್ ಸಿಂಗ್ ಗ್ರೋವರ್ ಅವರಿಗೆ ಇದು ಮೂರನೇ ಮದುವೆ!

2016ರಲ್ಲಿ ಬಿಪಾಶಾ ಬಸು ಅವರನ್ನು ಮದುವೆಯಾಗುವ ಮುನ್ನ ಕರಣ್ ಸಿಂಗ್ ಗ್ರೋವರ್ ಎರಡು ಬಾರಿ ಮದುವೆಯಾಗಿ ವಿಚ್ಛೇದನ ಪಡೆದಿದ್ದರು.

ಹೌದು, 2008ರಲ್ಲಿ ಶ್ರದ್ಧಾ ನಿಗಮ್ ಅವರನ್ನ ಕರಣ್ ಸಿಂಗ್ ಗ್ರೋವರ್ ಮದುವೆಯಾದರು. ಆದರೆ, 10 ತಿಂಗಳಲ್ಲಿ ಶ್ರದ್ಧಾ ನಿಗಮ್ - ಕರಣ್ ಸಿಂಗ್ ಗ್ರೋವರ್ ಸಂಸಾರದಲ್ಲಿ ಬಿರುಕು ಮೂಡಿತು. ಶ್ರದ್ಧಾ ನಿಗಮ್ ಅವರಿಂದ ವಿಚ್ಛೇದನ ಪಡೆದ ಕರಣ್ 2012ರಲ್ಲಿ ನಟಿ ಜೆನ್ನಿಫರ್ ವಿಂಗೆಟ್ ಅವರನ್ನ ವಿವಾಹವಾದರು. 2014ರಲ್ಲಿ ಜೆನ್ನಿಫರ್ ವಿಂಗೆಟ್ ಮತ್ತು ಕರಣ್ ಸಿಂಗ್ ಗ್ರೋವರ್ ದೂರಾದರು.

2016ರಲ್ಲಿ ಬಾಲಿವುಡ್ ನಟಿ ಬಿಪಾಶಾ ಬಸು ಅವರನ್ನ ಕರಣ್ ಸಿಂಗ್ ಗ್ರೋವರ್ ಮದುವೆಯಾದರು. ಕರಣ್ ಸಿಂಗ್ ಗ್ರೋವರ್ ಅವರಿಗಿಂತ ಬಿಪಾಶಾ ಬಸು 3 ವರ್ಷ ಹಿರಿಯರು.

Edited By : Nirmala Aralikatti
PublicNext

PublicNext

16/08/2022 01:20 pm

Cinque Terre

23.65 K

Cinque Terre

8